ಗಾಜಿಯಾಬಾದ್, ಫೆ.02 (DaijiworldNews/PY): ಶಿವಸೇನಾ ಸಂಸದ ಸಂಜಯ್ ರಾವುತ್ ಅವರು ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಮಂಗಳವಾರ ಭೇಟಿಯಾದರು.

ಕೇಂದ್ರ ಸರ್ಕಾರವು ಪ್ರತಿಭಟನಾ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಯಾಗಿಸುತ್ತಿರುವ ವೇಳೆ ಸಂಜಯ್ ರಾವತ್ ಅವರು ಪ್ರತಿಭಟನಾ ಸ್ಥಳವನ್ನು ತಲುಪಿದ್ದು, ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಭೇಟಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, "ಜ.26ರ ಗಣರಾಜ್ಯೋತ್ಸವ ದಿನಂದು ನಡೆದ ಘಟನೆಯ ಬಳಿಕ ರೈತರ ಹೋರಾಟವನ್ನು ಸರ್ಕಾರ ಹತ್ತಿಕ್ಕಲು ಯತ್ನಿಸಿದೆ. ಈ ವೇಳೆ ನಾವು ಪ್ರತಿಭಟನಾನಿರತ ರೈತರೊಂದಿಗೆ ನಿಲ್ಲಬೇಕು. ಇದು ನಮ್ಮ ಕರ್ತವ್ಯ. ರೈತರ ಹೋರಾಟಕ್ಕೆ ಇಡೀ ಮಹಾರರಾಷ್ಟ್ರ ಬೆಂಬಲಿಸುತ್ತಿದೆ" ಎಂದಿದ್ದಾರೆ.