ಮುಂಬೈ,ಫೆ.02 (DaijiworldNews/HR): ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿಂತೆ ಡ್ರಗ್ಸ್ ಪ್ರಕರಣದಡಿ ಸಹಾಯಕ ಚಲನಚಿತ್ರ ನಿರ್ದೇಶಕ ರಿಷಿಕೇಶ್ ಪವಾರ್ ಅವರನ್ನು ಎನ್ಸಿಬಿ ಮಂಗಳವಾರ ಬಂಧಿಸಿದೆ ಎಂದು ತಿಳಿದು ಬಂದಿದೆ.

"ರಿಷಿಕೇಶ್ ಪವಾರ್ಗೆ ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಎನ್ಸಿಬಿಯು ಅನೇಕ ಬಾರಿ ಸಮನ್ಸ್ ಜಾರಿ ಮಾಡಿತ್ತು, ಆದರೆ ಇದೀಗ ಅವರನ್ನು ಎನ್ಸಿಬಿಯ ಮುಂಬೈ ವಿಭಾಗದ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಬಂಧನಕ್ಕೂ ಮುನ್ನ ರಿಷಿಕೇಶ್ ಮನೆಯಲ್ಲಿ ಎನ್ಸಿಬಿ ಶೋಧ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಅಧಿಕಾರಿಗಳು ಕೆಲವೊಂದು ಗ್ಯಾಜೆಟ್ಗಳನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.