ಚಂಡೀಗಡ, ಫೆ.02 (DaijiworldNews/HR): ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರ ಕಾರಿನ ಮೇಲೆ ಪಂಜಾಬ್ನ ಜಲಾಲಾಬಾದ್ನಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.

ಈ ದಾಳಿಯ ಹಿಂದೆ ಪೊಲೀಸ್ ಬೆಂಬಲಿತ ಕಾಂಗ್ರೆಸ್ ಗೂಂಡಾಗಳ ಕೈವಾಡವಿದೆ ಎಂದು ಶಿರೋಮಣಿ ಅಕಾಲಿದಳ ಆರೋಪಿಸಿರುವುದಾಗಿ ವರದಿಯಾಗಿದೆ,
ಇನ್ನು ಈ ದಾಳಿ ವೇಳೆ ಸುಖ್ಬೀರ್ ಸಿಂಗ್ ಬಾದಲ್ ಅವರನ್ನು ರಕ್ಷಿಸಲು ಮುಂದಾದ ಪಕ್ಷದ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆದಿದ್ದು, ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದೂ ಪಕ್ಷ ಹೇಳಿದೆ.