ಭೋಪಾಲ್, ಫೆ.02 (DaijiworldNews/MB) : ''ಕೆಲವು ಬಿಜೆಪಿ ನಾಯಕರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಿ ಅದರಲ್ಲಿ ಮದ್ಯಪಾನ ಮಾಡುತ್ತಾರೆ'' ಎಂದು ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಆರೋಪ ಮಾಡಿದರು.

''ಬಿಜೆಪಿ ನಾಯಕರು ರಾಮ ಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸಿ ಅದರಿಂದ ಮದ್ಯವನ್ನು ಖರೀದಿಸುತ್ತಾರೆ'' ಎಂದು ಕಾಂಗ್ರೆಸ್ ಶಾಸಕ ಕಾಂತಿಲಾಲ್ ಭೂರಿಯಾ ಹೇಳಿದರು.
''ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಬಿಜೆಪಿ ನಾಯಕರು ಹಲವು ವರ್ಷಗಳ ಹಿಂದೆ ಸಾವಿರಾರು ಕೋಟಿಗಳನ್ನು ಸಂಗ್ರಹಿಸಿದ್ದರು. ಆ ನಿಧಿ ಎಲ್ಲಿಗೆ ಹೋಯಿತು?'' ಎಂದು ಪ್ರಶ್ನಿಸಿರುವ ಅವರು, ''ಹಗಲಲ್ಲಿ ರಾಮ ಮಂದಿರಕ್ಕಾಗಿ ಬಿಜೆಪಿ ನಾಯಕರು ಹಣ ಸಂಗ್ರಹಿಸಿ ರಾತ್ರಿ ಅದೇ ಹಣದಲ್ಲಿ ಮದ್ಯಪಾನ ಮಾಡುತ್ತಾರೆ'' ಎಂದು ಆರೋಪಿಸಿದರು.
ಏತನ್ಮಧ್ಯೆ, ''ಈ ದೇಣಿಗೆ ನೇರವಾಗಿ ರಾಮ ಮಂದಿರ ಟ್ರಸ್ಟ್ನ ಖಾತೆಗೆ ಠೇವಣಿಯಾಗುತ್ತದೆ'' ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕ ರಾಮೇಶ್ವರ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಮಧ್ಯಪ್ರದೇಶದ ಸಂಪುಟ ಸಚಿವ ವಿಶ್ವಸ್ ಸಾರಂಗ್ ಅವರು, ''ಕಾಂಗ್ರೆಸ್ ಶಾಸಕ ಕಾಂತಿಲಾಲ್ ಭೂರಿಯಾ ಅವರ ಆರೋಪ ನಾಚಿಕೆಗೇಡಿನದ್ದು ಎಂದು ಹೇಳಿದ್ದು ಕಾಂಗ್ರೆಸ್ ಯಾವಗಲೂ ಭಗವಾನ್ ರಾಮನ ವಿರುದ್ದವೇ ಮಾತನಾಡುತ್ತದೆ'' ಎಂದು ದೂರಿದ್ದಾರೆ.