ಮುಂಬೈ, ಫೆ.02 (DaijiworldNews/PY): "ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಇಬ್ರಾಹಿಂನ ಸಹಚರ ಪರ್ವೇಜ್ ಖಾನ್ ಅಲಿಯಾಸ್ ಚಿಂಕು ಪಠಾಣ್ ಎಂಬಾತನನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆ" ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಚಿಂಕು ಪಠಾಣ್ನ ಸಂಬಂಧಿಕ ಡಾನ್ ಕರೀಂ ಲಾಲಾ ಎಂಬಾತನನ್ನು ಎನ್ಸಿಬಿ ಅಧಿಕಾರಿಗಳು ಮುಂಬೈನಲ್ಲಿ ಬಂಧಿಸಿದ್ದರು.
"ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ನಲ್ಲಿ ಸೋಹಿಲ್ ಸಯ್ಯದ್ ಹಾಗೂ ಝಿಶಾನ್ ಎಂಬ ಇಬ್ಬರನ್ನು ಬಂಧಿಸಲಾಗಿತ್ತು. ಈ ಸಂದರ್ಭ ಚಿಂಕು ಪಟಾಣ್ ಕೂಡಾ ಡ್ರಗ್ದ್ ಪ್ರಕರಣದಲ್ಲಿ ಪಾಲ್ಗೊಂಡಿರುವ ಬಗ್ಗೆ ವಿಷಯ ತಿಳಿದುಬಂದಿದೆ" ಎಂದು ಎಟಿಎಸ್ ಅಧಿಕಾರಿಗಳು ಹೇಳಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಬಂಧನದಲ್ಲಿದಲ್ಲಿರುವ ಚಿಂಕು ಪಠಾಣ್ನನ್ನು ಶನಿವಾರ ಎಟಿಎಸ್ ವಶಕ್ಕೆ ಪಡೆದುಕೊಂಡಿದ್ದು, ಅದೇ ದಿನ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.
ಇದರ ಬಗ್ಗೆ ನ್ಯಾಯಾಲಯವು ವಿಚಾರಣೆ ನಡೆಸಿದ್ದು, ಫೆ.10ರವರೆಗೆ ಪಠಾಣ್ನನ್ನು ಎಟಿಎಸ್ ಕಸ್ಟಡಿಗೆ ನೀಡಿದೆ.