ಕೆ.ಆರ್.ನಗರ, ಫೆ.02 (DaijiworldNews/PY): "ಇತರ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬಳಿ ಹಾಸಿಕೊಂಡೇ ಕುಳಿತಿದ್ದರು" ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹೆಚ್.ವಿಶ್ವನಾಥ್ ಅವರು ಇನ್ನೊಂದು ರಾಜಕೀಯ ಪಕ್ಷ ಇಲ್ಲದಿದ್ದರೆ ಕರ್ಚಿಫ್ ಹಾಕಿ ಅಥವಾ ಟವೆಲ್ ಹಾಕಿರುತ್ತಿದ್ದರು ಎಂದಿರುವ ಹೆಚ್ಡಿಕೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ರಾಜಕೀಯ ಪಕ್ಷಗಳಿಗೆ ನಾನು ಕರ್ಚೀಫ್ ಹಾಕಿರುತ್ತಿದ್ದೆ ಎಂದಿರುವ ಕುಮಾರಸ್ವಾಮಿ ಅವರು ಕಂಬಳಿ ಹಾಸಿಕೊಂಡೇ ಕುಳಿತಿದ್ದರು" ಎಂದು ವ್ಯಂಗ್ಯವಾಡಿದ್ದಾರೆ.
"ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದಲ್ಲಿ ನಾನು ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ನನ್ನನ್ನು ಕಾಂಗ್ರೆಸ್ ಮುಖ್ಯಮಂತ್ರಿಯಂತೆ ನಡೆಸಿಕೊಂಡಿಲ್ಲ ಎಂದು ಹೇಳುತ್ತಾರೆ. ಮತ್ತೊಂದೆಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಇಂದು ರಾಜಕೀಯ ಪಕ್ಷವೇ ಅಲ್ಲ. ಅವರಿಗೆ ಸಿದ್ದಾಂತವಿಲ್ಲ ಎಂದಿದ್ದಾರೆ. ಹಾಗಾದರೆ, ತತ್ವ ಸಿದ್ದಂತಗಳಿಲ್ಲದ ಎರಡು ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ಬಳಿಕ ಸರ್ಕಾರ ಇಬ್ಬರು ಮಹಾನ್ ನಾಯಕರಿಂದ ಪತನವಾಗಿದೆ" ಎಂದಿದ್ದಾರೆ.
"ನಾವು ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣೀಕರ್ತರಲ್ಲ. ಸಮ್ಮಿಶ್ರ ಸರ್ಕಾರ ಪತನವಾಗಲು ಹೆಚ್.ಡಿ.ಕೆ ಹಾಗೂ ಸಿದ್ದರಾಮಯ್ಯ ಅವರು ಮುಖ್ಯವಾದ ಕಾರಣೀಕರ್ತರು ಎನ್ನುವ ವಿಚಾರವನ್ನು ಜನತೆ ತಿಳಿಯಬೇಕು. ಏಕೆಂದರೆ ಅವರಿಬ್ಬರೂ ಅದನ್ನು ಸಾಬೀತಿಪಪಡಿಸಿದ್ದಾರೆ" ಎಂದು ಹೇಳಿದ್ದಾರೆ.