ನವದೆಹಲಿ, ಫೆ.02 (DaijiworldNews/HR): ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಬಹುದಾದ ಕಾರಣದಿಂದಾಗಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಭಾಗಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸುವುದು ಹಾಗೂ ಹೆಚ್ಚಿನ ಬ್ಯಾರಿಕೇಡ್ ಹಾಕುವುದನ್ನು ಕೈಬಿಡಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಸಾಂಧರ್ಭಿಕ ಚಿತ್ರ
ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಸಂಚಾರಿ ಪೊಲೀಸರು, "ದೆಹಲಿ ಗಡಿ ಭಾಗದಲ್ಲಿ ಪ್ರಯಾಣಿಸುವವರು ಪರ್ಯಾಯ ದಾರಿಗಳನ್ನು ಬಳಸಬೇಕು" ಎಂದು ತಿಳಿಸಿದ್ದಾರೆ.
ಇನ್ನು ಪ್ರತಿಭಟನಾಕಾರ ರೈತರ ಓಡಾಟವನ್ನು ತಡೆಯಲು ಸಿಂಘು ಗಡಿಯ ಮುಖ್ಯ ಹೆದ್ದಾರಿಯ ನಡುವೆ ಕಾರ್ಮಿಕರು, ಪೊಲೀಸರ ನಿಗಾದಲ್ಲಿ ಕಬ್ಬಿಣದ ಸರಳುಗಳನ್ನು ಹಾಕಲಾಗಿದ್ದು, ದೆಹಲಿ-ಹರಿಯಾಣ ಗಡಿಯಲ್ಲಿರುವ ಹೆದ್ದಾರಿಯ ಮತ್ತೊಂದು ಭಾಗವನ್ನು ತಾತ್ಕಾಲಿಕ ಸಿಮೆಂಟ್ ಗೋಡೆ ಹಾಕಿ, ಸಂಚಾರವನ್ನು ಪ್ರಾಯೋಗಿಕವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.