ಚಿತ್ರದುರ್ಗ,ಫೆ.02 (DaijiworldNews/HR): "ಕೊರೊನಾ ಸೋಂಕಿನ ಆಂತಕದಲ್ಲೂ ಬಿಜೆಪಿಯವರು ಭ್ರಷ್ಟಾಚಾರ ಮಾಡಿದ್ದು, ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂಬ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಕೊರೊನಾ ಸೋಂಕಿನಲ್ಲಿಯೂ ಬಿಜೆಪಿ ಭ್ರಷ್ಟಾಚಾರ ಮಾಡಿದ್ದು,ಹಾಸಿಗೆ, ದಿಂಬು, ಔಷಧಿಯಲ್ಲಿ ಭ್ರಷ್ಟಾಚಾರ ಮಾಡಿದವರು ಬಿಜೆಪಿಯವರು" ಎಂದರು.
ಇನ್ನು "ಬಿಜೆಪಿ ದೇಶಕ್ಕೆ ಕೆಟ್ಟ ಬಜೆಟ್ ನೀಡಿದ್ದು, ಯಾವ ವರ್ಗದವರಿಗೂ ಬಜೆಟ್ ಬಗ್ಗೆ ಸಮಾಧಾನ, ಉತ್ಸಾಹವೇ ಇಲ್ಲ. ರೈತರು, ಕಾರ್ಮಿಕರು, ಸರ್ಕಾರಿ ನೌಕರರು ಸೇರಿದಂತೆ ಎಲ್ಲಾ ವರ್ಗಕ್ಕೆ ತೊಂದರೆ ಆಗಿದೆ. ಜೊತೆಗೆ ಡೀಸೆಲ್, ಪೆಟ್ರೋಲ್ ಬೆಲೆ ಮತ್ತೆ ಏರಿಕೆಯಾಗಿದೆ. ಜನ ರೊಚ್ಚಿಗೆ ಎದ್ದಿದ್ದಾರೆ" ಎಂದು ಹೇಳಿದ್ದಾರೆ.