ಬೆಂಗಳೂರು, ಫೆ.02 (DaijiworldNews/PY): ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ನ ಹಗರು ಯುದ್ದ ವಿಮಾನ ತಯಾರಿಕಾದ ಎರಡನೇ ಕ್ಷೇತ್ರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಉದ್ಘಾಟಿಸಿದರು.

ಫೆ.3ರಿಂದ 5ರವರೆಗೆ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ.
ಈ ಬಾರಿಯ ಏರೊ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ದಿಪಡಿಸಲಾಗಿರುವ ವಿಮಾನಗಳ ಪ್ರದರ್ಶನಕ್ಕೆ ಎಚ್ಎಎಎಲ್ ಯೋಜನೆ ಮಾಡಿದ್ದು, ಆತ್ಮನಿರ್ಭರ ಭಾರತದ ವಿಮಾನಗಳು ಕೇಂದ್ರಬಿಂದುಗಳಾಗಲಿವೆ.
ಈ ವಿಮಾನಗಳು ಪರಿಕಲ್ಪನೆ, ಸ್ಥಳೀಯವಾಗಿ ಅಭಿವೃದ್ದಿ ಹಾಗೂ ಸಹಯೋಗ ಘೋಷವಾಕ್ಯದಡಿ ಪ್ರದರ್ಶನ ನೀಡಲಿವೆ.
ಏರ್ ಶೋ ಭದ್ರತಾ ಕ್ರಮಗಳ ವಿಚಾರದ ಬಗ್ಗೆ ಶನಿವಾರ ಆದೇಶ ಹೊರಡಿಸಿರುವ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, "ನಗರದಲ್ಲಿ ಡ್ರೋನ್ ಸೇರಿದಂತೆ ಮೈಕ್ರೋಲೈರ್ಟ್ಸ್ ಹಾಗೂ ಇತರೆ ವಸ್ತುಗಳ ಹಾರಾಟಕ್ಕೆ ನಿಷೇಧ ಹೇರಲಾಗಿದೆ" ಎಂದು ತಿಳಿಸಿದ್ದಾರೆ.
"ಏರ್ ಶೋಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಆಗಮಿಸಿಲಿದ್ದಾರೆ. ನಿರ್ದಿಷ್ಟವಾದ ವಿಮಾನಗಳ ಹಾರಾಟಕ್ಕೆ ಮಾತ್ರವೇ ಅವಕಾಶ" ಎಂದಿದ್ದಾರೆ.