ನವದೆಹಲಿ, ಫೆ.02 (DaijiworldNews/PY): ಸ್ವಾವಲಂಬನೆಯನ್ನು ಸೂಚಿಸುವ ಆತ್ಮನಿರ್ಭರತಾ ಎನ್ನುವ ಪದವನ್ನುಆಕ್ಸ್ಫಡ್ ಭಾಷಾ ನಿಘಂಟಿನ 2020ರ ಹಿಂದಿ ಪದವೆಂದು ಗುರುತಿಸಲ್ಪಟ್ಟಿದೆ.

ಏಕೆಂದರೆ, ಇದು ಸಾಂಕ್ರಾಮಿಕ ರೋಗಗಳ ಅಪಾಯವನ್ನು ನಿಭಾಯಿಸಿದ ಹಾಗೂ ರೋಗದಿಂದ ಗುಣಮುಖರಾದ ಅಸಂಖ್ಯಾತ ಭಾರತೀಯರ ದಿನನಿತ್ಯದ ಸಾಧನೆಗಳನ್ನು ಮೌಲ್ಯೀಕರಿಸಿದೆ. ಭಾಷಾ ತಜ್ಞರಾದ ಕೃತಿಕಾ ಅಗ್ರವಾಲ್, ಪೂನಮ್ ನಿಗಮ್ ಸಹಾಯ್ ಹಾಗೂ ಇಮೋಜನ್ ಫಾಕ್ಸೆಲ್ ಅವರ ಸಲಹಾ ಸಮಿತಿಯು ಈ ಪದವನ್ನು ಆಯ್ಕೆ ಮಾಡಿದೆ.
ಆಕ್ಸ್ಫರ್ಡ್ ಹಿಂದಿ ಪದವು ವಾರ್ಷಿಕ ನೀತಿ, ಮನಸ್ಥಿತಿ ಹಾಗೂ ಮುನ್ಸೂಚನೆಗಳನ್ನು ಆಯ್ಕೆ ಮಾಡಿದ ಒಂದು ಪದವಾಗಿದೆ. ಅಭಿವ್ಯಕ್ತಿ ಹಾಗೂ ಸಾಂಸ್ಕೃತಿಕ ಮಹತ್ವದ ಪದವಾಗಿದ್ದು, ಒಂದು ಶಾಶ್ವತವಾದ ಸ್ಥಾನವನ್ನು ಪಡೆದಿದೆ.
ಪ್ರಧಾನಿ ಮೋದಿ ಅವರು ಕೊರೊನಾ ಪ್ರಾರಂಭವಾದ ತಿಂಗಳುಗಳಲ್ಲಿ ಭಾರತದ ಕೊರೊನಾ ಚೇತರಿಕೆ ಪ್ಯಾಕೇಜ್ ಅನ್ನು ಘೋಷಿಸಿದ ಸಂದರ್ಭ ಆತ್ಮನಿರ್ಭರತಾ ಎನ್ನುವ ಪದವನ್ನು ಬಳಸಿದ್ದರು.
ಆಕ್ಸ್ಫರ್ಡ್ ಹೇಳಿಕೆಯೊಂದರಲ್ಲಿ, "ಒಂದು ದೇಶವಾಗಿ, ಆರ್ಥಿಕತೆಯಾಗಿ, ಸಮಾಜವಾಗಿ ಹಾಗೂ ಸ್ವಾವಲಂಬಿಗಳಾಗುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು" ಎಂದಿದೆ.
"ಪ್ರಧಾನಿ ಮೋದಿ ಅವರ ಭಾಷಣವನ್ನು ಅನುಸರಿಸಿ, ಆತ್ಮನಿರ್ಭರತಾ ಎನ್ನುವ ಪದದ ಬಳಕೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಭಾರತದ ಸಾರ್ವಜನಿಕ ನಿಘಂಟಿನಲ್ಲಿ ಒಂದು ನುಡಿಗಟ್ಟು ಹಾಗೂ ಒಂದು ಪರಿಕಲ್ಪನೆಯಾಗಿದೆ" ಎಂದು ತಿಳಿಸಿದೆ.
ಇಡೀ ಆತ್ಮನಿರ್ಭರ ಭಾರತ ಅಭಿಯಾನದ ಅತ್ಯುತ್ತಮವಾದ ಯಶಸ್ಸಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಲಸಿಕೆ ತಯಾರಿಕೆ. ಅಲ್ಲದೇ ಗಣರಾಜ್ಯೋತ್ಸವ ದಿನದಂದು ನಡೆದ ಮೆರವಣಿಗೆಯಲ್ಲಿ ಆತ್ಮನಿರ್ಭರ ಭಾರತ್ ಅಭಿಯಾನವನ್ನು ಜೈವಿಕ ತಂತ್ರಜ್ಞಾನ ಇಲಾಖೆ ಎತ್ತಿ ತೋರಿಸಿದೆ.
2017ರಲ್ಲಿ ಆಧಾರ್, 2018ರಲ್ಲಿ ನಾರೀ ಶಕ್ತಿ ಹಾಗೂ 2019ರಲ್ಲಿ ಸಂವಿಧಾನ್ ಪದವನ್ನು ಬಳಸಿದ್ದು, ಈ ಪದಗಳು ವರ್ಷದ ಹಿಂದಿನ ಪದ ಎಣದು ಆಯ್ಕೆಯಾಗಿದ್ದವು.