ಠಾಣೆ, ಫೆ.02 (DaijiworldNews/MB) : ಮಹಾರಾಷ್ಟ್ರದ ಭಿವಂಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಪೋಲಿ ಪೊಲೀಸರು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಭಿವಂಡಿಯ ಹರಿಹಾರ್ ಕಾಂಪೌಂಡ್ನಲ್ಲಿ ಸೋಮವಾರ ಒಂದು ಅಂತಸ್ತಿನ ಕಟ್ಟಡದಲ್ಲಿದ್ದ ಆನ್ಲೈನ್ ಸರಕು ವಿತರಣಾ ಸಂಸ್ಥೆಯ ಗೋದಾಮು ಕುಸಿದ್ದಿದ್ದು 35 ವರ್ಷದ ಭದ್ರತಾ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದರು. ಆರು ಮಂದಿಗೆ ಗಾಯವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಗೋದಾಮಿನ ಮಾಲೀಕರಾದ ಸೂರ್ಯಕಾಂತ್ ಪಾಟೀಲ್, ರಾಮಚಂದ್ರ ಪಾಟೀಲ್ ಮತ್ತು ಮಹಾನಂದಾ ಪಾಟೀಲ್ ಸೇರಿ ಕಟ್ಟಡದ ವಿನ್ಯಾಸ ಮಾಡಿದ್ದ ಸಂಸ್ಥೆಯ ಓರ್ವ ಸಿಬ್ಬಂದಿಯ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಈವರೆಗೂ ಯಾರನ್ನೂ ಕೂಡಾ ಪೊಲೀಸರು ಬಂಧಿಸಿಲ್ಲ ಎಂದು ವರದಿಯಾಗಿದೆ.