ನವದೆಹಲಿ, ಫೆ.02 (DaijiworldNews/MB) : ದೇಶದಲ್ಲಿ ಪೆಟ್ರೋಲ್, ಡೀಸೆಲ್ ಏರಿಕೆಯಾಗುತ್ತಿರುವ ವಿಚಾರದಲ್ಲಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ''ರಾವಣನ ಲಂಕಾದಲ್ಲಿ ಪೆಟ್ರೋಲ್ಗೆ 51 ರೂಪಾಯಿ, ಆದರೆ ರಾಮನ ಭಾರತದಲ್ಲಿ 93 ರೂಪಾಯಿ'' ಎಂದು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ರಾಮನ ಭಾರತದಲ್ಲಿ ಪೆಟ್ರೋಲ್ 93, ಸೀತಾಳ ನೇಪಾಳದಲ್ಲಿ 53 ರೂಪಾಯಿ, ರಾವಣನ ಲಂಕಾದಲ್ಲಿ 51 ರೂಪಾಯಿ'' ಎಂದು ಹೇಳಿದ್ದಾರೆ.
ದೇಶದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಲ್ಲೇ ಇದ್ದು ಪ್ರಸ್ತುತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ಗೆ 86.30, ಡಿಸೇಲ್ಗೆ 76.48 ಇದೆ. ಮುಂಬೈನಲ್ಲಿ ಪೆಟ್ರೋಲ್ಗೆ 92.86 ಹಾಗೂ ಡಿಸೇಲ್ಗೆ 83.30 ಇದೆ.
ಇನ್ನು ಕೇಂದ್ರ ವಿತ್ತ ಸಚಿವೆ ಸೋಮವಾರ ಬಜೆಟ್ ಮಂಡಿಸಿದ ವೇಳೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಜಾರಿ ಮಾಡಿದ್ದು ಈ ಹಿನ್ನೆಲೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಸಾಧ್ಯತೆಯಿದೆ. ಆದರೆ ಕೇಂದ್ರ ಸರ್ಕಾರ ಈ ಸಾಧ್ಯತೆಯನ್ನು ಅಲ್ಲಗಳೆದಿದೆ.