ಬೆಂಗಳೂರು, ಫೆ.02 (DaijiworldNews/MB) : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದ ಗುಂಪಿನ ಮೇಲೆ ದುಷ್ಕರ್ಮಿಗಳ ತಂಡವೊಂದು ಹಲ್ಲೆ ಮಾಡಿರುವ ಘಟನೆ ನಗರದ ಬಿಸ್ಮಿಲ್ಲಾನಗರದಲ್ಲಿ ನಡೆದಿದೆ ಎಂದು ವರದಿಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರನ್ನು ಅಡ್ನಾನ್, ಅಹ್ಮದ್ ಪಾಷಾ, ಅಬ್ದುಲ್ ಗೌಸ್, ಮೊಹಮ್ಮದ್, ಶಬೀರ್, ಸೈಯದ್ ಸುಹೇಲ್, ಮತ್ತು ಸೈಯದ್ ಅಕ್ಮಲ್ ಎಂದು ಗುರುತಿಸಲಾಗಿದೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕಾಗಿ ಶೇಷಾಚಲ, ಯಶವಂತ್, ಸುರೇಶ್ ಎಂಬುವವರು ನಿಧಿ ಸಂಗ್ರಹ ಮಾಡುತ್ತಿದ್ದ ಸಂದರ್ಭ ಆರೋಪಿಗಳು ಹಲ್ಲೆ ನಡೆಸಿದ್ದು ನಿಧಿ ಸಂಗ್ರಹಕ್ಕಾಗಿ ತಂದಿದ್ದ ವಾಹನದ ಮೇಲೂ ದಾಳಿ ಮಾಡಲಾಗಿದ್ದು ವಾಹನ ಜಖಂಗೊಳಿಸಿದ್ದಾರೆ ಎಂದು ದೂರಲಾಗಿದೆ.
ನಿಮಗಿಲ್ಲಿ ಬರಲು ಅವಕಾಶ ನೀಡಿದವರು ಯಾರು ಎಂದು ಕೇಳಿದ ಗುಂಪು ಕಲ್ಲು ತೂರಾಟ ನಡೆಸಿದೆ ಎಂದು ಆರೋಪಿಸಲಾಗಿದೆ. ಕೂಡಲೇ ಸ್ಥಳಕ್ಕೆ ಸುದ್ದಗುಂಟೆ ಠಾಣೆಗೆ ಆಗಮಿಸಿದ ಡಿಸಿಪಿ ಶ್ರೀನಾಥ್ ಆಗಮಿಸಿ ಘಟನೆ ನಡೆದ ಸ್ಥಳದ ಸಿಸಿಟಿವಿ ವಿಡಿಯೋ ತುಣುಕಗಳನ್ನು ಪರಿಶೀಲಿಸಿ ಕಾರ್ಯಾಚರಣೆ ನಡೆಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.