ಚೆನ್ನೈ, ಫೆ.02 (DaijiworldNews/MB) : ಕಟ್ಟಡ ಕುಸಿತದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಮಿಳುನಾಡಿನಲ್ಲಿ ಮೂವರು, ಮಹಾರಾಷ್ಟ್ರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.

ತಮಿಳುನಾಡಿನ ಮಧುರೈನ ವೆಸ್ಟ್ ವಡಂಪೊಕ್ಕಿ ರಸ್ತೆಯಲ್ಲಿರುವ ಶೆಟರ್ ಅಂಗಡಿಯ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಕಟ್ಟಡದೊಳಗಿದ್ದ ಕನಿಷ್ಠ ಮೂವರು ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇತ್ತ ಮುಂಬೈನ ಥಾಣೆಯ ಭಿವಾಂಡಿಯಲ್ಲಿ ಒಂದು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಧುರೈನ ವೆಸ್ಟ್ ವಡಂಪೊಕ್ಕಿ ರಸ್ತೆಯಲ್ಲಿರುವ ಶೆಟರ್ ಅಂಗಡಿಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲೆಂದು ಕಟ್ಟಡದ ಮಾಲೀಕ ಕಟ್ಟಡವನ್ನು ತೆರವುಗೊಳಿಸಲು ಕಾರ್ಮಿಕರನ್ನು ನೇಮಿಸಿದ್ದರು. ಈ ಕೆಲಸದ ವೇಳೆ ಕಾರ್ಮಿಕರ ಮೇಲೆ ಕಬ್ಬಿಣದ ಶೆಟರ್ ಕುಸಿದು ಅಲ್ಲಿದ್ದ ಆರು ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ನಡೆದ ದುರಂತದಲ್ಲಿ ಐವರು ಗಾಯಗೊಂಡಿದ್ದಾರೆ.