ಉಳ್ಳಾಲ, ಫೆ. 01 (DaijiworldNews/SM): ಸಮುದ್ರಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಿರುವ ಘಟನೆ ಉಳ್ಳಾಲದ ಮೊಗವೀರಪಟ್ಟಣ ಸಮೀಪ ನಡೆದಿದೆ. ಶಿವಾಜಿ ಜೀವರಕ್ಷಕ ಈಜುಗಾರ ಸಂಘ (ಶಿವಾಜಿ ಲೈಫ್ಗಾರ್ಡ್ ಈಜುಗಾರರ ಸಂಘ) ಉಲ್ಲಾಲ್ ಸದಸ್ಯ ಕುನಾಲ್ ಅಮೀನ್ ಮತ್ತು ಕೋಸ್ಟ್ ಗಾರ್ಡ್ ಸಿಬ್ಬಂದಿ ಕಿರಣ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಮುದ್ರಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.

ಕುಟುಂಬವು ಉಳ್ಳಾಲ ದರ್ಗಾವನ್ನು ನೋಡಲು ಧಾರವಾಡದ ನಿಜಾಮುದ್ದೀನ್ ಕಾಲೋನಿಯಿಂದ ಆಗಮಿಸಿತ್ತು. ಬಳಿಕ ಸಮುದ್ರ ಕಿನಾರೆಗೆ ತೆರಳಿದ್ದಾರೆ. ಆ ಸಂದರ್ಭದಲ್ಲಿ ಕುಟುಂಬದ ನಾಲ್ವರು ಸಮುದ್ರಪಾಲಾಗುತ್ತಿದ್ದರು. ಸಮುದ್ರ ದಡದಲ್ಲಿ ಆಡುವಾಗ ದಂಪತಿಗಳಾದ ಮೊಹಮ್ಮದ್ ಗೌಸ್, ರೇಷ್ಮಾ, ಗೌಸ್ನ ಸೋದರಳಿಯ ನಿಜಾಮ್ ಮತ್ತು ದಂಪತಿಯ ಮಗು ನಿಶ್ಮಾ ಅವರು ಕೊಚ್ಚಿ ಹೋಗಿದ್ದಾರೆ.
ತಕ್ಷಣ ಗಮನಿಸಿದ ಶಿವಾಜಿ ಜೀವರಕ್ಷಕ ಈಜುಗಾರ ಸಂಘ ಸದಸ್ಯರು ತಮ್ಮ ಪ್ರಾಣದ ಹಂಗನ್ನು ತೊರೆದು ಸಮುದ್ರಪಾಲಾಗುತ್ತಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.