ಲಖನೌ,ಫೆ.01 (DaijiworldNews/HR): "ದೇಶದ ಕೋಟ್ಯಂತರ ಜನರು ಸರ್ಕಾರದ ಆಕರ್ಷಕ ಆಶ್ವಾಸನೆ ಮತ್ತು ಟೊಳ್ಳು ಭರವಸೆಯಿಂದ ಬೇಸತ್ತು ಹೋಗಿದ್ದಾರೆ" ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯವತಿ ಹೇಳಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, "ಕೇಂದ್ರ ಸರ್ಕಾರ ಈ ಮೊದಲು ಘೋಷಿಸಿದ ನೀತಿಗಳನ್ನು ಜಾರಿಗೆಗೊಳಿಸಿದರೆ ಉತ್ತಮವಾಗಿರುತ್ತದೆ. ಇಂದಿನ ಬಜೆಟ್ ಯಾವುದೇ ರೀತಿಯಲ್ಲಿ ಬಡತನ, ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳನ್ನು ಬಗೆಹರಿಸುವಂತೆ ಕಾಣುತ್ತಿದೆಯೇ?" ಎಂದು ಪ್ರಶ್ನಿಸಿದ್ದಾರೆ.
ಇನ್ನು "ಸರ್ಕಾರದ ಆಕರ್ಷಕ ಆಶ್ವಾಸನೆ ಮತ್ತು ಟೊಳ್ಳು ಭರವಸೆಗಳಿಂದ ದೇಶದ ಕೋಟ್ಯಾಂತರ ಜನರು ಬೇಸತ್ತು ಹೋಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರನ್ನು ಪೀಡಿಸುತ್ತಿದೆ" ಎಂದು ಹೇಳಿದ್ದಾರೆ.