ನವದೆಹಲಿ, ಜ.28 (DaijiworldNews/PY): "ಪ್ರತಿಭಟನೆ ಅಂತ್ಯಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು" ಎಂದು ಉತ್ತರಪ್ರದೇಶದ ಗಾಜಿಪುರ್ ಜಿಲ್ಲಾಡಳಿತ ಗುರುವಾರ ಆದೇಶ ನೀಡಿದೆ.

ಹಾಗಾಗಿ ಇಂದು ರಾತ್ರಿಯೊಳಗೆ ಪ್ರತಿಭಟನಾನಿರತ ರೈತರನ್ನು ವಾಪಾಸ್ಸು ಕಳುಹಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನ.2ರಿಂದ ಪ್ರತಿಭಟನೆ ಮಾಡುತ್ತಿದ್ದು, ಗಾಜಿಪುರ್ ಗಡಿಯನ್ನು ಬಂದ್ ಮಾಡಲಾಗಿತ್ತು.
"ಪ್ರತಿಭಟನಾಕಾರರನ್ನು ಹತ್ತಿಕ್ಕಲು ನಾವು ಯಾವುದೇ ಬಲವನ್ನು ಉಪಯೋಗಿಸಿಲ್ಲ. ಪ್ರತಿಭಟನಾಕಾರರ ಪೈಕಿ ಹಿರಿಯರು, ಮಾನಸಿಕ ಅಸ್ವಸ್ಥರು ಇದ್ದು, ಅವರನ್ನು ಮನೆಗಳಿಗೆ ಕಳುಹಿಸುತ್ತಿದ್ದೇವೆ" ಎಂದು ಬಾಘಪತ್ ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಸಿಂಗ್ ಹೇಳಿದ್ದಾರೆ.