ಚೆನ್ನೈ, ಜ.27 (DaijiworldNews/PY): ಚೆನ್ನೈನ ಮರೀನಾ ಬೀಚ್ ಬಳಿ ತಮಿಳುನಾಡಿನ ಮಾಜಿ ಸಿಎಂ ದಿ.ಜೆ.ಜಯಲಲಿತಾ ಅವರ ನೆನಪಿಗೋಸ್ಕರ ನಿರ್ಮಿಸಿರುವ 'ಫೀನಿಕ್ಸ್' ಪರಿಕಲ್ಪನೆಯ ಸ್ಮಾರಕವನ್ನು ಬುಧವಾರ ಸಿಎಂ ಕೆ.ಪಳನಿಸ್ವಾಮಿ ಅವರು ಉದ್ಘಾಟಿಸಿದರು.

ಸ್ಮಾರಕವನ್ನು ಎಐಎಡಿಎಂಕೆ ಪಕ್ಷದ ಬೆಂಬಲಿಗರ ಜಯ ಘೋಷಣೆಯ ಮಧ್ಯೆ ಸಿಎಂ ಪಳನಿಸ್ವಾಮಿ ಅವರು ಉದ್ಘಾಟಿಸಿದರು. ಬಳಿಕ ಸಿಎಂ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರಸೆಲ್ವಂ ಹಾಗೂ ವಿಧಾನಸಭಾ ಅಧ್ಯಕ್ಷ ಪಿ. ಧನಪಾಲ್ ಅವರು ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್ ಅವರ ಸ್ಮಾರಕವೂ ಮರೀನಾ ಬೀಚ್ನ ಬಳಿ ಇದೆ. ಈ ಸ್ಮಾರಕದ ಪಕ್ಕದಲ್ಲೇ 2016ರ ಡಿಸೆಂಬರ್ 5 ರಂದು ಜಯಲಲಿತಾ ಅವರ ದೇಹವನ್ನು ಸಮಾಧಿ ಮಾಡಲಾಗಿತ್ತು. ಈ ಸ್ಮಾರಕಕ್ಕೆ 2018ರಲ್ಲಿ ಪಳನಿಸ್ವಾಮಿ ಹಾಗೂ ಪನ್ನೀರಸೆಲ್ವಂ ಅವರು ಜೊತೆಯಾಗಿ ಅಡಿಗಲ್ಲು ಹಾಕಿದ್ದರು.
ಈ ಫಿನಿಕ್ಸ್ ಪರಿಕಲ್ಪನೆಯ ಸ್ಮಾರಕದ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಕೋಟಿ. ರೂ. ಅನುದಾನ ನೀಡಿತ್ತು. ಜಯಲಲಿತಾ ಅವರ ಅಭಿಮಾನಿಗಳು ಈ ಸ್ಮಾರಕವನ್ನು 'ಅಮ್ಮಾ' ಎನ್ನುತ್ತಾರೆ.