ಕೋಲ್ಕತ್ತಾ, ಜ.17 (DaijiworldNews/PY): "ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕೊರೊನಾ ಲಸಿಕೆ ಪೂರೈಕೆ ಮಾಡಿಲ್ಲ" ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಕೊರೊನಾ ಲಸಿಕೆ ಪ್ರಕ್ರಿಯೆಯ ಬಗ್ಗೆ ಮುಖ್ಯ ಕಾರ್ಯದರ್ಶಿ ಅಲ್ಬಾನ್ ಬ್ಯಾಬರ್ಜಿ ಹಾಗೂ ಹಿರಿಯ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, "ಪಶ್ಚಿಮ ಬಂಗಾಳಕ್ಕೆ ಕೇಂದ್ರದಿಂದ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಪೂರೈಕೆಯಾಗಿಲ್ಲ. ಮುಂಚೂಣಿಯ ಸೇನಾನಿಗಳಿಗೆ ಮಾತ್ರವೇ ಲಸಿಕೆಯನ್ನು ನೀಡಲಾಗುವುದು" ಎಂದು ಹೇಳಿದ್ದಾರೆ.
"ಅವಶ್ಯಕವಿದ್ದಲ್ಲಿ ರಾಜ್ಯ ಸರ್ಕಾರವೇ ತಯಾರಿಕ ಏಜೆನ್ಸಿಗಳಿಂದ ಲಸಿಕೆಯನ್ನು ಖರೀದಿಸಿ, ಸಾಮಾನ್ಯ ಜನರಿಗೆ ಉಚಿತವಾಗಿ ಲಸಿಕೆ ವಿತರಿಸಲಾಗುವುದು" ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿರುವ ಮುಂಚೂಣಿ ಕೊರೊನಾ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರವು 5 ಲಕ್ಷದ 96 ಸಾವಿರ ಲಸಿಕೆಗಳನ್ನು ರವಾನೆ ಮಾಡಿದೆ.