ದಾವಣಗೆರೆ, ಜ. 16 (DaijiworldNews/MB) : ''ರಹಸ್ಯ ಸಿಡಿ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ದ ಬಹಳ ಆರೋಪಗಳು ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ತಕ್ಷಣ ತನಿಖೆಗೆ ಆದೇಶ ಮಾಡಬೇಕು'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದರು.

ಶುಕ್ರವಾರ ನಗರದ ಬಾಪೂಜಿ ಎಂಬಿಎಂ ಕಾಲೇಜಿನ ಹೆಲಿಪ್ಯಾಡ್ನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಬಿಜೆಪಿಯವರೇ ಬ್ಲಾಕ್ಮೇಲ್ ಗಿರಾಕಿಗಳಾಗಿದ್ದಾರೆ. ಅದೇನೋ ಸಿ.ಡಿ. ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ತನಿಖೆ ನಡೆದು ಸತ್ಯಾಂಶ ತಿಳಿಯಬೇಕು'' ಎಂದು ಹೇಳಿದರು.
''ಬಿಜೆಪಿಯ ಕೆಲವರು ಈಗ ಸಿ.ಡಿ. ಬಗ್ಗೆ ಆರೋಪಗಳನ್ನು ಮಾಡುತ್ತಿದ್ದಾರೆ. ಅಷ್ಟಕ್ಕೂ ಇವರು ಅಧಿಕಾರಕ್ಕೆ ಬಂದದ್ದೆ ಶಾಸಕರನ್ನು ಖರೀದಿ ಮಾಡಿ'' ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
''ಈ ಸರ್ಕಾರವು ಪಾಪದ ಸರ್ಕಾರವಾಗಿದೆ. ಅವರು ನೈತಿಕತೆಯಿಂದ ಈ ಸರ್ಕಾರ ರಚಿಸಿಲ್ಲ. ಅಕ್ರಮವಾಗಿ ಸರ್ಕಾರ ರಚಿಸಿದ್ದಾರೆ'' ಎಂದು ದೂರಿದರು.