ಮುಂಬೈ, ಜ. 13 (DaijiworldNews/MB) : ಭೇಟಿಯಾದ ಸೋನು ಸೂದ್ ಅವರನ್ನು ಮುಂಬೈನ ನಿವಾಸದಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರು ಬುಧವಾರ ಭೇಟಿಯಾದರು.

ಬೃಹತ್ ಮುಂಬೈ ಮಹಾನಗರ ಪಾಲಿಕೆಯು(ಬಿಎಂಸಿ) ಸೋನು ಸೂದ್ ವಿರುದ್ಧ ವಸತಿ ಕಟ್ಟಡವನ್ನು ಅನುಮತಿಯಿಲ್ಲದೆ ಹೋಟೆಲ್ ಆಗಿ ಪರಿವರ್ತಿಸಿದ ಆರೋಪದಲ್ಲಿ ಎಫ್ಐಆರ್ ದಾಖಲಿಸುವಂತೆ ಕಳೆದ ವಾರ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ತಮ್ಮ ವಿರುದ್ಧ ಬಿಎಂಸಿ ಕಳೆದ ಅಕ್ಟೋಬರ್ನಲ್ಲಿ ನೋಟಿಸ್ ಜಾರಿಗೊಳಿಸಿದ್ದನ್ನು ಹಾಗೂ ಡಿಸೆಂಬರ್ನಲ್ಲಿ ನೋಟಿಸ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿವಿಲ್ ನ್ಯಾಯಾಲಯವು ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸೋನು ಸೂದ್ ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಎಂಸಿ ಈ ಬಾಂಬೆ ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು.
ಇದರ ಬೆನ್ನಲ್ಲೇ ಸೋನು ಸೂದ್ ಅವರು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದು, ಇದು ಬಹಳ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಬಿಎಂಸಿ ಅಫಿಡವಿಟ್ನಲ್ಲಿ ''ಬಾಲಿವುಡ್ ನಟ ಸೋನು ಸೂದ್ ಪದೇ ಪದೇ ಅಪರಾಧ ಎಸಗುವ ಚಾಳಿಯುಳ್ಳವರು'' ಎಂದು ದೂರಿದೆ.