ಮುಂಬೈ, ಜ. 12 (DaijiworldNews/MB) : ವಾಣಿಜ್ಯ ನಗರಿಯ ಪ್ರಸಿದ್ಧ ಮುಚಾದ್ ಪಾನ್ ವಾಲಾ ರಾಮ್ಕುಮಾರ್ ತಿವಾರಿ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಎನ್ಸಿಬಿ ಮಂಗಳವಾರ ಬಂಧಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ, ಸೋಮವಾರವೇ ತಿವಾರಿ ಅವರನ್ನು ವಶಕ್ಕೆ ಪಡೆಯಲಾಗಿದ್ದು ಮಂಗಳವಾರ ಔಪಪಚಾರಿಕವಾಗಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ವಿಚಾರಣೆ ಸಂದರ್ಭ ರಾಮ್ ಕುಮಾರ್ ತಿವಾರಿ ಹೆಸರು ಬಂದಿದೆ ಎನ್ನಲಾಗಿದೆ. ಸಜ್ಜಾನಿ ಒಂದು ವರ್ಷಕ್ಕೂ ಅಧಿಕ ಕಾಲ ಭಾರತದಲ್ಲಿ ನೆಲೆಸಿದ್ದು ನಟಿ ದಿಯಾ ಮಿರ್ಜಾ ಮತ್ತು ಅವರ ಸಹೋದರಿಯ ಮಾಜಿ ವ್ಯವಸ್ಥಾಪಕನ ಜೊತೆ ಬಂಧನಕ್ಕೆ ಒಳಪಟ್ಟಿದ್ದನು.