ಪಟ್ನಾ,ಜ.11 (DaijiworldNews/HR): 'ಬಿಹಾರದಲ್ಲಿ ಎನ್ಆರ್ಸಿ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ, ಎಲ್ಲಾದರೂ ಜಾರಿಗೊಳಿಸಲು ಮುಂದಾದರೆ ಅದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ಯಾರು ನಿಜವಾದ ಮಿತ್ರರು, ಯಾರು ಶತ್ರು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಚುನಾವಣೆಗೆ ಐದು ತಿಂಗಳು ಮುನ್ನವೇ ಸೀಟು ಹಂಚಿಕೆ ಒಪ್ಪಂದ (ಎನ್ಡಿಎ ಜೊತೆ) ಮಾಡಿಕೊಳ್ಳಬೇಕಿತ್ತೆಂದು ಈಗ ಅನಿಸುತ್ತಿದೆ. ಇದರಿಂದ ನಮಗೆ ಹೆಚ್ಚು ಲಾಭವಾಗುತ್ತಿತ್ತು" ಎಂದರು.
ಇನ್ನು "ಈ ಬಾರಿ ಮುಖ್ಯಮಂತ್ರಿಯಾಗುವುದಕ್ಕೆ ನಾನು ಮಾನಸಿಕವಾಗಿ ಸಿದ್ದನಿರಲಿಲ್ಲ, ಪಕ್ಷದ ಶಾಸಕರು ಹಾಗೂ ಮಿತ್ರಪಕ್ಷದವರ ಒತ್ತಾಯಕ್ಕೆ ಮಣಿದು ಈ ಹುದ್ದೆ ಅಲಂಕರಿಸಿದ್ದೇನೆ. ನಾವೆಲ್ಲರೂ ಹಿಂದಿನ ಕಹಿ ಘಟನೆಗಳನ್ನೆಲ್ಲಾ ಮರೆತು ನಮಗೆ ಮತ ನೀಡಿರುವ ಹಾಗೂ ನೀಡದವರ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ಈ ಸರ್ಕಾರವು ಐದು ವರ್ಷ ಯಶಸ್ವಿಯಾಗಿ ಆಡಳಿತ ನಡೆಸಲಿದೆ" ಎಂದು ಹೇಳಿದ್ದಾರೆ.