ಮುಂಬೈ, ಜ.07 (DaijiworldNews/PY): ಬಾಲಿವುಡ್ ನಟ ಸೋನು ಸೂದ್ ಅವರ ವಿರುದ್ದ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೊರೇಶನ್ ದೂರು ದಾಖಲಿಸಿದೆ.

ಅನುಮತಿ ಇಲ್ಲದೇ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಿದ್ದಾರೆ ಎನ್ನುವ ಹಿನ್ನೆಲೆ ಸೋನು ಸೂದ್ ಅವರ ವಿರುದ್ದ ಬಿಎಂಸಿ ಪ್ರಕರಣ ದಾಖಲಿಸಿಕೊಂಡಿದೆ.
ಸೋನು ಸೂದ್ ಅವರಿಗೆ ಸೇರಿದ ಆರು ಮಹಡಿಯ ಕಟ್ಟಡ ಜುಹುವಿನಲ್ಲಿದ್ದು, ಇತ್ತೀಚೆಗೆ ಆ ಕಟ್ಟಡವನ್ನು ಹೊಟೇಲ್ ಆಗಿ ಪರಿವರ್ತಿಸಲಾಗಿತ್ತು.
ಈ ಸಂಬಂಧ ಸೋನು ಸೂದ್ ಅವರ ವಿರುದ್ದ ಬಿಎಂಸಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.