ನವದೆಹಲಿ, ಜ. 07 (DaijiworldNews/MB) : ತೈಲೋತ್ಪನ್ನಗಳ ದರಗಳು ಏರಿಕೆ ಕಂಡಿದ್ದು, ಈ ಹಿನ್ನೆಲೆ ಪೆಟ್ರೋಲ್ ದರ ದಾಖಲೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಡಿಸೇಲ್ ದರವೂ ಕೂಡಾ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಗುರುವಾರ ಪೆಟ್ರೋಲ್ ದರ ಮತ್ತೆ 23 ಪೈಸೆ ಹೆಚ್ಚಳವಾಗಿದ್ದು ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 87.2 ರೂ. ಏರಿಕೆ ಕಂಡಿದೆ. ಡೀಸೆಲ್ ದರವೂ ಕೂಡಾ 26 ಪೈಸೆ ಏರಿಕೆಯಾಗಿದ್ದು ಬೆಂಗಳೂರಿನಲ್ಲಿ ಪ್ರತೀ ಲೀಟರ್ ಡೀಸೆಲ್ಗೆ 78.86ರೂ. ಆಗಿದೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ಗೆ 84.2 ರೂ. ಗೆ ಏರಿಕೆ ಕಂಡಿದ್ದು ಪ್ರತೀ ಲೀಟರ್ ಡೀಸೆಲ್ ದರ 74.38ಕ್ಕೆ ಹೆಚ್ಚಳವಾಗಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90.83 ಮತ್ತು ಡೀಸೆಲ್ ಲೀಟರ್ಗೆ 81.07ಕ್ಕೆ ಹೆಚ್ಚಳವಾಗಿದೆ.