ಮುಂಬೈ,ಜ.05 (DaijiworldNews/HR): ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರರ ವಿರುದ್ಧ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಎಫ್ಐಆರ್ ದಾಖಲಿಸಿದೆ ಎಂದು ತಿಳಿದು ಬಂದಿದೆ.

ದುಬೈನಿಂದ ಮುಂಬೈಗೆ ಬಂದಿದ್ದ ಸಲ್ಮಾನ್ ಖಾನ್ ಸಹೋದರರಾದ ಸೋಹೇಲ್ ಖಾನ್, ಅರ್ಬಾಜ್ ಖಾನ್, ಅರ್ಬಾಜ್ ಖಾನ್ ಪುತ್ರ ನಿರ್ವಾಣ್ ಅವರಿಗೆ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇರಲು ಹೇಳಲಾಗಿತ್ತು, ಆದರೆ ನಿಯಮ ಉಲ್ಲಂಘಿಸಿ ಮೂವರು ಹೋಟೆಲ್ನಿಂದ ಹೊರ ಬಂದಿದ್ದಾರೆಂದು ಪೊಲೀಸರು ಆರೋಪಿಸಿದ್ದಾರೆ.
ಹಾಗಾಗಿ ಸೊಹೇಲ್ ಖಾನ್, ಅರ್ಬಾಜ್ ಖಾನ್, ಅರ್ಬಾಜ್ ಖಾನ್ ಪುತ್ರ ನಿರ್ವಾಣ್ ವಿರುದ್ಧ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಎಫ್ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.