ಮಂಗಳೂರು, ಜ 04 (DaijiworldNews/SM): ನಗರ ಹೊರವಲಯದ ಪಕ್ಕಲಡ್ಕ ಸಮೀಪದ ಬಜಾಲ್ ಎಂಬಲ್ಲಿ ಬಾವಿಗೆ ಸ್ಕೂಟರ್ ಸವಾರರು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸವಾರರ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದೆ. ಆದರೆ, ಆತನ ಗುರುತು ಪತ್ತೆಯಾಗಿಲ್ಲ.

ಸೋಮವಾರ ರಾತ್ರಿ ಸುಮಾರು 7:15ರ ವೇಳೆಗೆ ಬಜಾಲ್ ಜನನಿಬಿಡವಾದ ಎತ್ತರದ ಪ್ರದೇಶದಲ್ಲಿ ಚಲಿಸುತ್ತಿದ್ದ ಸ್ಕೂಟರ್ ಸವಾರನ ನಿಯಂತ್ರಣ ಕಳೆದುಕೊಂಡಿದೆ. ಅಲ್ಲದೆ, ರಸ್ತೆ ಪಕ್ಕದಲ್ಲೇ ಇದ್ದ ಆವರಣವಿರುವ ಬಾವಿಗೆ ಸ್ಕೂಟರ್ನಲ್ಲಿದ್ದ ಇಬ್ಬರು ಬಿದ್ದಿದದ್ದಾರೆ ಎನ್ನಲಾಗಿದೆ. ಆ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದೆ. ಸ್ಕೂಟರ್ ಮತ್ತು ಎರಡು ಹೆಲ್ಮೆಟ್ ಬಾವಿಯ ಬಳಿ ಕಂಡು ಬಂದಿದೆ.
ಇನ್ನು ಅಪಘಾತಕ್ಕಿಡಾದ ಸ್ಕೂಟರ್ ಬಾವಿಯ ಮೇಲ್ಭಾಗದಲ್ಲೇ ಪತ್ತೆಯಾಗಿದೆ. ಘಟನೆಯ ಸಂದರ್ಭ ಸವಾರರು ಬಾವಿಯೊಳಗೆ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.