ಹೈದರಾಬಾದ್, ಡಿ.29(DaijiworldNews/HR): ತೆಲುಗು ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಅವರ ಪುತ್ರ ರಾಮಚರಣ್ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೊರೊನಾ ಪರೀಕ್ಷೆ ಮಾಡಿದಾಗ ನನಗೆ ಸೋಂಕು ತಗುಲಿರುವುದು ಖಚಿತವಾಗಿದೆ, ಯಾವುದೇ ಸೋಂಕಿನ ಲಕ್ಷಣವಿಲ್ಲ. ಮನೆಯಲ್ಲೇ ಇದ್ದು ಶೀಘ್ರದಲ್ಲೇ ಗುಣಮುಖನಾಗಿ ಹೊರಬರುತ್ತೇನೆಂದು ಎಂದು ಬರೆದುಕೊಂಡಿದ್ದಾರೆ.
ಇನ್ನು ಕಳೆದ ಕೆಲವು ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷಿಸಿಕೊಳ್ಳಲು ವಿನಂತಿಸಿದ್ದಾರೆ.