ಬೆಂಗಳೂರು,ಡಿ.24 (DaijiworldNews/HR): "ಲವ್ ಜಿಹಾದ್ ಎನ್ನುವಂತಹದು ಹಿಂದೂ- ಮುಸ್ಲಿಂ ವಿಚಾರವಲ್ಲ, ಬದಲಾಗಿ ಅದು ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಯ ಮಹತ್ತರ ವಿಚಾರವಾಗಿದೆ" ಎಂದು ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಈ ಕುರಿತು ಸಂವಾದ ಕಾರ್ಯಮವೊಂದರಲ್ಲಿ ಮಾತನಾಡಿದ ಅವರು, "ಮುಸ್ಲಿಮರನ್ನು ಹೊರತು ಪಡಿಸಿ ಬೇರೆ ಹೆಣ್ಣುಮಕ್ಕಳು ಮುಸ್ಲಿಂ ಯುವಕನನ್ನು ಮದುವೆಯಾಗುವುದಾದರೆ ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿ ಕಡ್ಡಾಯ ಮಾಡಬೇಕು. ಜತೆಗೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯಡಿ ವಿವಾಹವಾಗುವಂತಾದರೆ ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಯಾಗಲಿದೆ" ಎಂದರು.
ಇನ್ನು "ಲವ್ ಜಿಹಾದ್ ಹಿಂದೂ- ಮುಸ್ಲಿಂ ವಿಚಾರವಲ್ಲ, ಹಿಂದೂ, ಕ್ರೈಸ್ತ ಹೆಣ್ಣುಮಗಳು ಮುಸ್ಲಿಂ ಯುವಕನನ್ನು ವಿವಾಹವಾದರೆ ಸ್ವಧರ್ಮೀಯರನ್ನು ವಿವಾಹವಾದಾಗ ಸಿಗುವ ಕಾನೂನಾತ್ಮಕ ರಕ್ಷಣೆ ಸಿಗುವುದಿಲ್ಲ, ಆದರೆ ಮುಸ್ಲಿಂ ಯುವಕನನ್ನು ವಿವಾಹವಾದ ಅನ್ಯಧರ್ಮೀಯ ಹೆಣ್ಣುಮಗಳಿಗೂ ಹಕ್ಕುಗಳ ರಕ್ಷಣೆ ಸಿಗಬೇಕು ಎಂಬುದೇ ನಮ್ಮ ಉದ್ದೇಶ. ಈ ವಿವಾದ ಬಗೆಹರಿಸಲು ಹೊಸ ಕಾನೂನು ಜಾರಿಗಿಂತಲೂ ಸಣ್ಣ ಬದಲಾವಣೆ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶವಿದ್ದು, ಮುಸ್ಲಿಮೇತರ ಹೆಣ್ಣುಮಗಳು ಮುಸ್ಲಿಂ ಯುವಕನನ್ನು ವಿವಾಹವಾದರೆ ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿಯಾಗುವುದನ್ನು ಕಡ್ಡಾಯಗೊಳಿಸಬೇಕು" ಎಂದು ಹೇಳಿದ್ದಾರೆ.