ಬೆಂಗಳೂರು,ಡಿ.21 (DaijiworldNews/HR): ಈ ಹಿಂದೆಯೇ ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಎಂದು ನಾನು ಹೇಳಿದ್ದೆ, ಆಗ ನನ್ನ ಮೇಲೆ ಮುಗಿಬಿದ್ದರು. ಆದರೆ ಈಗ ಅದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೈತ ವಿರೋಧಿ ಕಾನೂನುಗಳಿಗೆ ಬೆಂಬಲ ಕೊಟ್ಟಿದ್ದಾರೆ, ಸಭಾಪತಿ ತೆಗೆಯಲು ಬೆಂಬಲ ನೀಡುತ್ತಿದ್ದಾರೆ. ಈಗ ಬಿಜೆಪಿಯ ಬಿ ಟೀಂ ಎಂದು ಸಾಬೀತಾಯ್ತು" ಎಂದರು.
ಇನ್ನು ಕುಮಾರಸ್ವಾಮಿ ಅವರ ಹೊಸ ಪಕ್ಷ ಕಟ್ಟಿ ಎಂಬ ಸವಾಲಿಗೆ ಉತ್ತರಿಸಿದ ಸಿದ್ದರಾಮಯ್ಯ, "ನಾನು ಕಾಂಗ್ರೆಸ್ನಲ್ಲಿಯೇ ಖುಷಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ನಾನು ಕೂಡ ಒಬ್ಬ ಹಾಗಾಗಿ ನಾನೇಕೆ ಹೊಸ ಪಕ್ಷ ಕಟ್ಟಲಿ. ಕುಮಾರಸ್ವಾಮಿ ಹೇಳಿದ್ದನ್ನು ನಾನು ಯಾಕೇ ಮಾಡಬೇಕು? ಅವರು ಕೇಳಿದಕ್ಕೆಲ್ಲ ನಾನು ಉತ್ತರಿಸಲ್ಲ" ಎಂದು ಹೇಳಿದ್ದಾರೆ.