ನವದೆಹಲಿ, ಡಿ. 18 (DaijiworldNews/SM): 2020ನೇ ವರ್ಷ ಬಹುತೇಕ ಕಹಿಯನ್ನೇ ನೀಡಿದ್ದು, ಹೊಸ ವರ್ಷ ರೈತರು ತಮ್ಮ ಪ್ರತಿಭಟನೆ ಕೈಬಿಟ್ಟು ಶಾಂತಗೊಳ್ಳಲಿದ್ದಾರೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟವನ್ನು ಶಾಂತಗೊಳಿಸುವ ಭರವಸೆಯನ್ನು ಸರ್ಕಾರಕ್ಕೆ ಸಿಕ್ಕಿದೆ. ಬಿಕ್ಕಟ್ಟನ್ನು ಬಗೆಹರಿಸಲು ವಿವಿಧ ಗುಂಪುಗಳೊಂದಿಗೆ ಅನೌಪಚಾರಿಕ ಸಂವಾದವನ್ನು ಮುಂದುವರಿಸುತ್ತಿದೆ ಎಂದರು. ಇದೇ ವೇಳೆ ಕಾಯ್ದೆಗಳ ರದ್ದತಿಗೆ ಬದಲಾಗಿ ಇನ್ನಿತರೆ ರೀತಿಗಳಿಂದ ರೈತರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಬದ್ದವಾಗಿದೆ ಎಂದು ಅವರು ಹೇಳಿದ್ದಾರೆ.