ನವದೆಹಲಿ,ಡಿ.15 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪುಣ್ಯ ತಿಥಿ ದಿನವಾದ ಇಂದು ಅವರಿಗೆ ಗೌರವ ಅರ್ಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾತನಾಡಿರುವ ಮೋದಿ, "ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ತೋರಿಸಿದ ಹಾದಿಯು ನಮ್ಮ ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲು ಸದಾ ಸ್ಫೂರ್ತಿ ನೀಡುತ್ತದೆ' ಎಂದರು.
ಇನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಪ್ರಬಲ ಮತ್ತು ಸಮೃದ್ಧ ಭಾರತಕ್ಕೆ ಅಡಿಪಾಯ ಹಾಕಿದ ಉಕ್ಕಿನ ಮನುಷ್ಯ ಎಂದು ಹೇಳಿದ್ದಾರೆ.