ನವದೆಹಲಿ, ಡಿ.13 (DaijiworldNews/HR): ಚೀನಾ ಜೊತೆಗಿನ ಗಡಿ ಬಿಕ್ಕಟ್ಟಿನಲ್ಲಿ ಭಾರತವನ್ನು ಪರೀಕ್ಷಿಸಲಾಗುತ್ತಿದ್ದು, ಈ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲಿರುವ ಭಾರತವು ರಾಷ್ಟ್ರೀಯ ಭದ್ರತಾ ಸವಾಲನ್ನು ನಿಭಾಯಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.

ಈ ಕುರಿತಿ ಮಾತನಾಡಿದ ಅವರು, "ಈ ಹಿಂದೆ ಪೂರ್ವ ಲಡಾಖ್ನಲ್ಲಿ ನಡೆದ ಘಟನೆಯು ಚೀನಾ ಹಿತಾಸಕ್ತಿಗೆ ಪೂರಕವಾಗಿರಲಿಲ್ಲ, ಆದರೆ ಭಾರತದ ಜನರ ಭಾವನೆಯ ಮೇಲೆ ಅದು ತೀವ್ರವಾಗಿ ಪರಿಣಾಮ ಬೀರಿತ್ತು" ಎಂದರು.
ಇನ್ನು "ಎರಡೂ ದೇಶಗಳ ನಡುವೆ ಉತ್ತಮ ಸಂಬಂಧಕ್ಕೆ ಎರಡೂ ಕಡೆಯಿಂದಲೂ ಹೆಚ್ಚಿನ ಕೆಲಸಗಳು ನಡೆದಿದೆ, ಆದರೆ ಈ ವರ್ಷ ನಡೆದ ಘಟನೆಯು ಇದಕ್ಕೆ ಪೂರಕವಾಗಿರಲಿಲ್ಲ. ಇಷ್ಟು ವರ್ಷಗಳಿಂದ ಕಾಪಾಡಿಕೊಂಡು ಬಂದಂತಹ ಸೌಹಾರ್ದತೆಯು ನಾಶವಾಗುತ್ತದೆಯೇ ಎನ್ನುವ ಆತಂಕ ಎದುರಾಗಿದೆ" ಎಂದು ಹೇಳಿದ್ದಾರೆ.