ಮೈಸೂರು,ಡಿ. 04 (DaijiworldNews/HR): ಇನ್ಮುಂದೆಯಾದರು ಏಕವಚನದಲ್ಲಿ ಮಾತನಾಡೋದನ್ನ ಬಿಟ್ಟು ಬಿಡಿ ಸಿದ್ದರಾಮಯ್ಯನವರೇ, ಕುರುಬ ಸಮುದಾಯವನ್ನು ಸರ್ವಾಂಗೀಣ ಬೆಳವಣಿಗೆ ಬಳಸಿಕೊಂಡಿರುವ ನೀವು ಅವರ ಪರ ಹೋರಾಟಕ್ಕೆ ಏಕೆ ಹಿಂದೇಟು ಹಾಕುತ್ತಿದ್ದೀರಾ? ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, "ರಾಜಕೀಯದಲ್ಲಿ ನಿಮಗಿಂತ ನಾನು ಹಿರಿಯ, ಹಾಗಾಗಿ ನನ್ನ ಸಲಹೆ ಸ್ವೀಕರಿಸಿ. ಮುಂದೆಯಾದರು ಎಲ್ಲರನ್ನು ಬಹುವಚನದಲ್ಲಿ ಮಾತನಾಡಿಸಿ. ದೇವರಾಜ ಅರಸು ಅವರಂತೆ ಎಲ್ಲರನ್ನು ಗೌರವಿಸೋದು ಕಲಿಯಿರಿ" ಎಂದು ಸಲಹೆ ನೀಡಿದ್ದಾರೆ.
"ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕಾದರೆ ನಮ್ಮ ಸಮುದಾಯ ಎಲ್ಲ ರೀತಿಯ ಸಹಾಯವನ್ನು ಮಾಡಿದೆ, ಅಂತ ಸಮುದಾಯಕ್ಕೆ ಹೋರಾಟ ಯಾಕೇ ಎಂದು ಹೇಳುತ್ತಿದ್ದಿರಲ್ಲ, ನೀವು ಹೋರಾಟ ಮಾಡಿಲ್ಲ ಅನಿಸುತ್ತದೆ, ನೀವು ಮಾರ್ಗದರ್ಶನ ಮಾಡಿದರೆ ಈ ಹೋರಾಟ ಇನ್ನು ಎತ್ತರಕ್ಕೆ ಬೆಳೆಯುತ್ತಿತ್ತು" ಎಂದು ಹೇಳಿದ್ದಾರೆ.