ಕಲಬುರಗಿ, ನ.20 (DaijiworldNews/HR): ನಾವು ಎಲ್ಲಾ ಸಮುದಾಯಗಳನ್ನು ಪ್ರೀತಿಸಿದಂತೆ ಮರಾಠ ಸಮುದಾಯವನ್ನು ಕೂಡ ಪ್ರೀತಿಸೋಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕನ್ನಡಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮರಾಠಾ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿರುವುದು ಭಾಷೆ ಮಧ್ಯದ ಗೊಂದಲ ಅಲ್ಲ, ಅದೊಂದು ಸಮುದಾಯಕ್ಕೆ ಆರ್ಥಿಕ ಬಲ ತುಂಬುವ ಉದ್ದೇಶದಿಂದ ನಿಗಮ ಮಾಡಲಾಗಿದೆ ಎಂದರು.
ಮರಾಠ ಸಮುದಾಯದ ಬಡವರಿಗೆ ಅನುಕೂಲ ಆಗಲು ಈ ತೀರ್ಮಾನ ಕೈಗೊಳ್ಳಲಾಗಿದ್ದು,ಕನ್ನಡ ಪ್ರಾಧಿಕಾರ, ಮರಾಠಿ ಪ್ರಾಧಿಕಾರ ರೀತಿ ಅಲ್ಲ. ಎಲ್ಲಾ ಸಮುದಾಯವನ್ನು ಪ್ರೀತಿಸಿದಂತೆ ಮರಾಠ ಸಮುದಾಯವನ್ನು ಪ್ರೀತಿಸೋಣ ಎಂದು ಕನ್ನಡಪರ ಸಂಘಟನೆಗಳಿಗೆ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ.