ಬೆಂಗಳೂರು,ನ.13 (DaijiworldNews/HR): ಬಿಹಾರ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ವೋಟಿಂಗ್ ಮಿಷನ್( ಇವಿಎಂ )ನನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬರುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲೆಕ್ಟ್ರಾನಿಕ್ ವೋಟಿಂಗ್ ಮಿಷನ್(ಇವಿಎಂ) ಅನ್ನು ಮನುಷ್ಯರೇ ಮಾಡಿರುವುದರಿಂದ ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದ್ದು, ಬಿಹಾರದಲ್ಲಿಯೂ ಈ ರೀತಿಯಾಗಿ ನಡೆದಿರಬಹುದು ಎಂಬ ಸಂಶಯವಿದೆ ಎಂದರು.
ಇನ್ನು ಇವಿಎಂ ಅನ್ನು ರದ್ದುಗೊಳಿಸಿ ಬ್ಯಾಲೆಟ್ ತರಬೇಕು, ಈ ಕುರಿತು ಎಲ್ಲಾ ಪಕ್ಷಗಳು ಒತ್ತಾಯಿಸಿ ಸುಪ್ರೀಂಕೋರ್ಟ್ ಗೆ ತಿಳಿಸಬೇಕು ಎಂದು ಹೇಳಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಕೂಡ ಕಾಂಗ್ರೆಸ್ ಹೆಚ್ಚು ಅಂತರದಿಂದ ಸೋಲಲು ಸಾಧ್ಯವಿರಲಿಲ್ಲ ಆದರೆ ವೋಟಿಂಗ್ ಪ್ಯಾಟ್ರನ್ ಚೇಂಜ್ ಆಗಿದೆ. ಬೆಂಗಳೂರಿನಲ್ಲಿಯೂ ಇವಿಎಂ ಹ್ಯಾಕ್ ಆಗಿರುವ ಸಂಶಯವಿದೆ ಎಂದು ಆರೋಪಿಸಿದ್ದಾರೆ.