ಪಾಟ್ನಾ, ನ.11 (DaijiworldNews/PY): "ಬಿಹಾರದಲ್ಲಿ ನಿತೀಶ್ ಕುಮಾರ್ ಅವರೇ ಎನ್ಡಿಎ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ" ಎಂದು ಬಿಹಾರದ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಹೇಳಿದ್ದಾರೆ.

"ಪ್ರಧಾನಿ ಮೋದಿ ಅವರ ಸುಧಾರಣಾ ನೀತಿಗಳ ಕಾರಣದಿಂದ ಬಿಹಾರದಲ್ಲಿ ಎನ್ಡಿಎ ಜಯಶಾಲಿಯಾಗಿದೆ. ಆಡಳಿತ ವಿರೋಧಿ ಎನ್ನುವಂತ ಆರೋಪಗಳನ್ನು ತಳ್ಳಿಹಾಕಿ ಎನ್ಡಿಎ ಸರ್ಕಾರ ಮತ್ತೆ ಗದ್ದುಗೆಗೇರಿದೆ" ಎಂದಿದ್ದಾರೆ.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಶೇ.100ರಷ್ಟು ನಿಜ ನಿತೀಶ್ ಕುಮಾರ್ ಅವರೇ ಸಿಎಂ ಆಗಲಿದ್ದಾರೆ" ಎಂದು ಹೇಳಿದ್ದಾರೆ.
"ನಾಲ್ಕನೇ ಬಾರಿ ಕೂಡಾ ಗೆಲುವು ಸಾಧಿಸುವುದು ಕಷ್ಟ. ಆದರೂ ಕೂಡಾ ನಾವು ಈ ಕಷ್ಟದ ನಡುವೆ ಗೆದ್ದಿದ್ದೇವೆ. ಬಿಹಾರದಲ್ಲಿ ನಾವು ಉತ್ತಮವಾದ ಆಡಳಿತ ನಡೆಸಬೇಕಿದೆ" ಎಂದಿದ್ದಾರೆ.