ಬೆಂಗಳೂರು,ನ. 05 ( DaijiworldNews/HR): ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಯ ಬಳಿಕ 2 ಕ್ಷೇತ್ರದಲ್ಲಿ ನಾವೇ ಗೆದ್ದಿದ್ದೇವೆ ಅಂತಾರೆ. ಹಾಗಾಗಿ ನಮ್ಮ ಪರಿಸ್ಥಿತಿ ಎರಡು ಅಥವಾ ಮೂರನೇ ಸ್ಥಾನಕ್ಕೆ ಬರಬಹದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೆ.ಆರ್.ಪೇಟೆಯ ಚುನಾವಣೆಯಲ್ಲಿ ಬಿಜೆಪಿಯವರು ಜಯಗಳಿಸಿದ್ದಾರೆ. ಅಂತೆಯೇ ರಾಜರಾಜೇಶ್ವರಿ ನಗರದಲ್ಲಿ ಕೂಡ ಚುನಾವಣಾ ನಡೆಸಿದ್ದಾರೆ ಇದನ್ನು ನೋಡಿದ್ರೆ, ನಮ್ಮ ಪರಿಸ್ಥಿತಿ ಎರಡು ಅಥವಾ ಮೂರನೇ ಸ್ಥಾನಕ್ಕೆ ನಾವು ಬರಬಹದು ಆದರೆ ಶಿರಾದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದವರು ವಿನಯ್ ಕುಲಕರ್ಣಿ ವಿಚಾರ ರಾಜಕೀಯ ಲಾಭ ಪಡೆಯುತ್ತಾ ಇದ್ದಾರೆ. ಆದರೆ, ಅವರು ಅಧಿಕಾರಿಗಳು ಮಾತ್ರ ನ್ಯಾಯಯುತ ತನಿಖೆ ನಡೆಸಬೇಕು. ಯೋಗಿಶ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.