ಬೆಂಗಳೂರು,,ನ.05 (DaijiworldNews/AK): ದೀಪಾವಳಿ ಹೊತ್ತಿನಲ್ಲೇ ರಾಜ್ಯದ ರೈತರಿಗೆ ಸಿಎಂ ಡಿಕೆ ಶಿವಕುಮಾರ್ ಬಂಪರ್ ಉಡುಗೊರೆ ನೀಡಿದ್ದಾರೆ. ಈ ಹಿಂದೆ 2,500 ರೂ. ಇದ್ದ ಬರ ಪರಿಹಾರದ ಮೊತ್ತವನ್ನ 5,000 ರೂ.ಗೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.

ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಹಣ ಜಮೆ ಮಾಡುವ ಮೂಲಕ ಬರ ಪರಿಹಾರ ವಿತರಣೆಗೆ ಸಿಎಂ ಚಾಲನೆ ನೀಡಿದರು. ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಖಾತೆಗೆ ಡಿಬಿಟಿ ಹಣ ಪಾವತಿಗೆ ಚಾಲನೆ ನೀಡಿದರು
ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು 2,500 ರೂ. ಬರ ಪರಿಹಾರ ಕೊಡುತ್ತಾ ಇದ್ದೀವಿ, ನಾವು ಹೇಳಿದಂತೆ 1,250 ಕೋಟಿ ರೂ. ಹಣ ಹಾಕುತ್ತಿದ್ದೇವೆ. ಡಿಬಿಟಿ ಮೂಲಕ ರೈತರ ಖಾತೆಗೆ ನೇರವಾಗಿ ಹಣ ಹೋಗಲಿದೆ. ದೀಪಾವಳಿ ಮುಗಿದ ಬಳಿಕ ಇನ್ನೂ 2,500 ರೂ. ಕೊಡುತ್ತೇವೆ . ಪ್ರತಿ ರೈತನಿಗೆ ಒಟ್ಟು 5,000 ರೂ. ಕೊಡುತ್ತೇವೆ ಎಂದರು.