ಬೆಂಗಳೂರು,ನ.05 (DaijiworldNews/AK): ಇದು ದುಷ್ಟ ಮತ್ತು ಲೂಟಿ ಸರಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದ್ದಾರೆ.ಬಸ್ ಪ್ರಯಾಣದರ ಏರಿಕೆಯನ್ನು ಖಂಡಿಸಿದ ನಗರದ ಮೆಜೆಸ್ಟಿಕ್ನಲ್ಲಿ ಇಂದು ಬಿಜೆಪಿ ವತಿಯಿಂದ ಭಿಕ್ಷಾಪಾತ್ರೆ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್. ಅಶೋಕ್ ಅವರು ಸರಕಾರವು ಗ್ಯಾರಂಟಿ ಸಂಬಂಧ ಸುಮಾರು ಐದಾರು ಸಾವಿರ ಕೋಟಿ ಹಣ ಕೊಡಬೇಕು. ಆ ಫ್ರೀ ಗ್ಯಾರಂಟಿಯಿಂದ ಹಣ ಕೊಡುವ ಯೋಗ್ಯತೆ ಇಲ್ಲದೆ ಜನರ ಮೇಲೆ ತೆರಿಗೆ ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಸ್ಕೀಮ್ಗೆ ಹಣ ಅವರಿಗೆ ಒಂದು ಪೈಸಾ ಕ್ರೋಡೀಕರಣ ಮಾಡಲು ಆಗುತ್ತಿಲ್ಲ. ಜನರ ಮೇಲೆ ಅದನ್ನ ತೆರಿಗೆ ರೂಪದಲ್ಲಿ ಹಾಕುವ ದುಷ್ಟ ಸರ್ಕಾರ ಇದು ಎಂದು ಆಕ್ಷೇಪಿಸಿದರು. ಇದೊಂದು ಲೂಟಿ ಸರ್ಕಾರ ಎಂದು ದೂರಿದರು.
ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಸರ್ಕಾರ ಬಂದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ನಿಂದಾನೇ ಐದರಿಂದ ಆರು ಸಾವಿರ ಕೋಟಿ ಹಣ ಇವರ ಖಜಾನೆಗೆ ಬಂದಿದೆ. ಇದನ್ನ ವಾಪಸ್ ಕೊಡಿ. ಪೆಟ್ರೋಲ್ ಬೆಲೆ ಏರಿಕೆ, ಡೀಸೆಲ್ ಬೆಲೆ ಏರಿಕೆ ಅಂತೀರಲ್ಲ, ಅದರಿಂದ ಹಣ ಬಂದಿದೆಯಲ್ಲ ವಾಪಸ್ ಕೊಡಿ. ಕೊಡೋಕೆ ಯೋಗ್ಯತೆ ಇಲ್ಲ. ಸರ್ಕಾರ ದಿವಾಳಿಯಾಗಿದೆ, ಸಂಬಳ ಕೊಡೋಕೂ ದುಡ್ಡಿಲ್ಲ ಎಂದು ಖಂಡಿಸಿದರು.
ಹಾಲು, ಮೊಸರು, ತುಪ್ಪದ ದರ ಏರಿಸಿದ್ದಾರೆ. ಜನಸಾಮಾನ್ಯ ಏನು ಮಾಡಬೇಕು ಎಂದು ಕೇಳಿದರು. ಇವತ್ತು ಸಾರಿಗೆ ಇಲಾಖೆ ಮುಚ್ಚುವ ಸ್ಥಿತಿಗೆ ತಂದಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ಇಲಾಖೆಯನ್ನು ಮುಚ್ಚುವ ಅಂತ ಸ್ಥಿತಿಗೆ ತಂದಿದ್ದಾರೆ. ಇವತ್ತು ಬಸ್ಗಳಿಗೆ ಟೈರ್ ಇಲ್ಲ, ಟ್ಯೂಬ್ ಇಲ್ಲ, ಹ್ಯಾಂಡಲ್ ಇಲ್ಲ, ಸ್ಟೇರಿಂಗ್ ಇಲ್ಲ, ಬ್ಯಾಟರಿ ಇಲ್ಲ. ಓಡೋದೇ ಇಲ್ಲ, ತಳ್ಳೋ ಬಸ್ಗಳು ಇವೆ ಎಂದು ಟೀಕಿಸಿದರು.
ಒಂದು ನೀತಿಗೆಟ್ಟ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷ ಭಷ್ಟಚಾರದಲ್ಲಿ ಮುಳುಗಿದೆ. ಇವತ್ತು ಜನರನ್ನ ಸುಲಿಗೆ ಮಾಡುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ತೊಲಗಬೇಕು ಎಂದು ಒತ್ತಾಯಿಸಿದರು. ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.