ನವದೆಹಲಿ, ನ 02 (DaijiworldNews/AK): ಬೆಳಕಿನ ಹಬ್ಬ ದೀಪಾವಳಿ ಅಂದಾಕ್ಷಣ ನೆನಪಾಗೋದು ಪಟಾಕಿಗಳು . ಹಬ್ಬಕ್ಕೆ ದೇಶಾದ್ಯಂತ ಜನ ಪಟಾಕಿ ಸಿಡಿಸಿ, ದೀಪ ಬೆಳಗಿಸಿ ಸಂಭ್ರಮಿಸುತ್ತಾರೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ಉಂಟಾಗುವ ಆತಂಕದಿಂದ ನಿಗದಿತ ಸಮಯದಲ್ಲಷ್ಟೇ ಪಟಾಕಿ ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ದೀಪಾವಳಿ ಆಚರಣೆಗಾಗಿ ನವೆಂಬರ್ 7 ಮತ್ತು 8 ರಂದು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ಪಟಾಕಿ (ಪರಿಸರ ಸ್ನೇಹಿ ಪಟಾಕಿ – Green Firecrackers) ಮಾತ್ರ ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪ್ರಸನ್ನ ಬಿ. ವರಾಲೆ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದೆ. ಆದರೆ ಈ ವಿನಾಯ್ತಿಯು ನಿರ್ದಿಷ್ಟ ಅವಧಿಗೆ ಮಾತ್ರ ಅನ್ವಯಿಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನವೆಂಬರ್ 7 ಮತ್ತು 8 ರಂದು 2 ದಿನಗಳಲ್ಲಿ ಬೆಳಗ್ಗೆ 6 ರಿಂದ 7 ಗಂಟೆವರೆಗೆ ಮತ್ತು ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿರುತ್ತದೆ. ನವೆಂಬರ್ 9 ರಿಂದ, ಹಸಿರು ಪಟಾಕಿ ಮೇಲಿನ ಸಂಪೂರ್ಣ ನಿಷೇಧವು ಮತ್ತೆ ಜಾರಿಗೆ ಬರಲಿದೆ ಎಂದು ಕೋರ್ಟ್ ತಿಳಿಸಿದೆ.