ಬೆಂಗಳೂರು, ಅ.31 (DaijiworldNews/AK): 2027ರ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೇಶಾದ್ಯಂತ 2027ರ ಜನವರಿ 25 ರಿಂದ ಫೆಬ್ರವರಿ 28 ರವರೆಗೆ ಮನೆ ಮನೆಗೆ ತೆರಳಿ ಜನಸಂಖ್ಯೆ ಗಣತಿ ಕಾರ್ಯವನ್ನು ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಮನೆ-ಮನೆ ಸಮೀಕ್ಷೆ ಆರಂಭವಾಗುವ ಮುನ್ನ, ಸಾರ್ವಜನಿಕರಿಗಾಗಿ ಜನವರಿ 10 ರಿಂದ ಜನವರಿ 24ರವರೆಗೆ ಸ್ವಯಂ-ಗಣತಿ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಬೃಹತ್ ಗಣತಿ ಕಾರ್ಯದ ಉಲ್ಲೇಖಿತ ದಿನಾಂಕವನ್ನು 2027ರ ಮಾರ್ಚ್ 1 ರಂದು ನಿಗದಿಪಡಿಸಲಾಗಿದ್ದು, ಮಾರ್ಚ್ 1 ರಿಂದ 5 ರವರೆಗೆ ಪರಿಷ್ಕರಣಾ ಸುತ್ತು ನಡೆಯಲಿದೆ.
ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಗೋವಾ, ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಹಾಗೂ ಮಣಿಪುರದಲ್ಲಿ (ಮುಂದಿನ ಆದೇಶದವರೆಗೆ) ಈ ಗಣತಿ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಲಡಾಖ್ ಹಾಗೂ ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಅತಿ ಹೆಚ್ಚು ಹಿಮಪಾತವಿರುವ ಪ್ರದೇಶಗಳನ್ನು ಈ ಬಾರಿಯ ಗಣತಿಯಿಂದ ಹೊರಗಿಡಲಾಗಿದೆ.
ಸ್ವಾತಂತ್ರ್ಯದ ಬಳಿಕ ನಡೆಯುತ್ತಿರುವ ಈ ಮಹತ್ವದ ಜನಗಣತಿಯು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿರಲಿದ್ದು, ಮೊಬೈಲ್ ಆಪ್ಗಳು ಮತ್ತು ಆನ್ಲೈನ್ ವ್ಯವಸ್ಥೆಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಜನಸಂಖ್ಯೆಯ ಸಾಮಾಜಿಕ, ಆರ್ಥಿಕ ಹಾಗೂರಚನಾತ್ಮಕ ವಿವರಗಳನ್ನು ಕrಕೊಳ್ಳಲು ಈ ಗಣತಿಯು ಅತ್ಯಂತ ನಿರ್ಣಾಯಕವಾಗಿದೆ.