ಡೆಹ್ರಾಡೂನ್, ಅ.30 (DaijiworldNews/AK): ಉತ್ತರಾಖಂಡದಲ್ಲಿರುವ ಬದರಿನಾಥ ಧಾಮದಿಂದ ಫಾಟ್ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಒಂದು ಪ್ರತಿಕೂಲ ಜೋಶಿಮಠ ಸಮೀಪ ಪತನಗೊಂಡಿದೆ.

ಜೋಶಿಮಠದ ‘ಹಾತಿ ಪಹಾಡ್’ ಹಿಂಭಾಗದಲ್ಲಿರುವ ಚಾಯಿ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ದುರ್ಗಮ ಬೆಟ್ಟ ಪ್ರದೇಶ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಪತನದ ಸ್ಥಳ ಅಥವಾ ಹೆಲಿಕಾಪ್ಟರ್ನ ಯಾವುದೇ ಅವಶೇಷಗಳು ಈವರೆಗೆ ಲಭ್ಯವಾಗಿಲ್ಲ.
ಬದರಿನಾಥ ಧಾಮದಿಂದ ಹೊರಟಿದ್ದ ಈ ಹೆಲಿಕಾಪ್ಟರ್, ಬದರಿನಾಥ ಮತ್ತು ಜೋಶಿಮಠ ನಡುವೆ ಹಾರಾಟ ನಡೆಸುತ್ತಿದ್ದ ವೇಳೆ ಏಕಾಏಕಿ ನಾಪತ್ತೆಯಾಗಿದ್ದು, ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕ ಕಡಿದುಕೊಂಡಿದೆ ಎಂದು ಚಮೋಲಿ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳೀಯ ಆಡಳಿತ, ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಚಾಯಿ ಗ್ರಾಮ ಹಾಗೂ ಹಾತಿ ಪಹಾಡ್ ಸುತ್ತಮುತ್ತಲಿನ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ.
ಚಾರ್ ಧಾಮ್ ಯಾತ್ರಾ ಮಾರ್ಗದಲ್ಲಿ ಹೆಲಿಕಾಪ್ಟರ್ಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗುತ್ತಿದೆ. . ಹೆಲಿಕಾಪ್ಟರ್ನಲ್ಲಿದ್ದ ಪ್ರಯಾಣಿಕರು ಮತ್ತು ಪೈಲಟ್ಗಳ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.