ಬೆಂಗಳೂರು,ಅ.26 (DaijiworldNews/AK): ಕಾಂಗ್ರೆಸ್ ದೇಶ ಮತ್ತು ರಾಜ್ಯದಲ್ಲಿ ಸರ್ವನಾಶವಾಗಲು ಅಪ್ಪ ಮತ್ತು ಮಗ ಸಾಕು. ಅಲ್ಲಿ ಅಪ್ಪ ಮಲ್ಲಿಕಾರ್ಜುನ ಖರ್ಗೆ ಇಲ್ಲಿ ಮಗ ಮರಿ ಖರ್ಗೆ ಸಾಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಜಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಎಲ್ಲೂ ಕಾಂಗ್ರೆಸ್ ಇಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೈಯ್ಯಲು ಎಲ್ಲಾದರೂ ಕಾಂಗ್ರೆಸ್ ಇರುತ್ತದೆ ಎಂದುಕೊಂಡಿದ್ದೆವು. ಆದರೆ ಇವರಿಬ್ಬರಿಂದ ಕಾಂಗ್ರೆಸ್ ಸರ್ವನಾಶ ಆಗುತ್ತಿದೆ. ಅರಳು ಮರಳಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಜಪ ಮಾಡಿಕೊಂಡು ಇರಬೇಕಾಗಿತ್ತು. ಆದರೆ ಇವರು ದಿನಾ ಮೋದಿಜಿ ಅವರ ಜಪ ಮಾಡುತ್ತಾರೆ. ಇವರು ಇಷ್ಟು ಕೀಳುಮಟ್ಟಕ್ಕೆ ಹೋಗಬಾರದಿತ್ತು ಎಂದು ಟೀಕಿಸಿದರು.
ಖರ್ಗೆ ಅವರಿಗೆ ನಡೆಯಲು ಆಗುತ್ತಿಲ್ಲ. ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೂ ಸಹ ನಡೆಯಲು ಆಗ್ತ ಇಲ್ಲ. ನಡೆಯಲಾಗದ ಕಾಂಗ್ರೆಸ್ ಕಾಕ್ರೋಚ್ ಪಕ್ಷದ ಜೊತೆ ಹೋಗುತ್ತಿದೆ. ಇಷ್ಟು ಹೊಲಸಾಗಿ ರಾಷ್ಟ್ರೀಯ ಅಧ್ಯಕ್ಷರು ಮಾತನಾಡಿದ್ದೇ ಇಲ್ಲ. ಮೋದಿ ಜೀ ಅವರು ಟೀ ಮಾರುತ್ತ ಇದ್ದರು ಎಂದು ಖರ್ಗೆ ಹೇಳಿದ್ದರು. ದೇಶದ ಜನ ಉಗಿದು ಉಪ್ಪು ಹಾಕಿದ್ದರಿಂದ ಅದನ್ನು ಬಿಟ್ಟರು. ಮೋದಿ ಅವರನ್ನು ಏನೂ ಮಾಡಲು ಆಗಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರೇ ಹೇಳಿದ್ದಾರೆ ಎಂದು ವಿವರಿಸಿದರು.
ಪುರಂದರ ದಾಸರು ಹೇಳಿದಂತೆ ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆʼ ಎಂಬಂತೆ ಇವರದು ಪರರ ದೂಷಣೆ ಆಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಆಡಿರುವ ಮಾತುಗಳು ಕಾಂಗ್ರೆಸ್ ಪಕ್ಷದ ಹೀನ ಸಂಸ್ಕøತಿ ತೋರಿಸುತ್ತದೆ. ಒಂದು ವೇಳೆ ಬಿಜೆಪಿಯವರು ನಿಮ್ಮ ಅಪ್ಪನ ಬಗ್ಗೆ ಹೇಳಿದ್ದರೆ ನೀವು ಏನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಫಿನಾಯಿಲ್, ಹಿಟ್, ಹಾರ್ಪಿಕ್ ಹಾಕಬೇಕು
ಉತ್ತರ ಪ್ರದೇಶದಲ್ಲಿ ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುದ್ಧಗೊಳಿಸಿದ್ದು ಸುದ್ದಿಯಾಗಿತ್ತು. ಹಾಗಾದರೆ ಖರ್ಗೆ ಅವರ ಬಾಯಿಯನ್ನು ಈಗ ಯಾವುದರಲ್ಲಿ ಸ್ವಚ್ಛಗೊಳಿಸಬೇಕು. ಗೋಮೂತ್ರ ಬದಲು ಫಿನಾಯಿಲ್, ಹಿಟ್, ಹಾರ್ಪಿಕ್ ಹಾಕಬೇಕು. ಮೋದಿ ನಾಲ್ಕನೇ ಬಾರಿ ಪ್ರಧಾನಿ ಆಗ್ತಾ ಇದ್ದಾರೆ ಎಂದು ಅವರ ಮೇಲೆ ನಿಮಗೆ ಕೋಪವಿದೆ, ಹೊಟ್ಟ ಉರಿ ಇದೆ. ಅದಕ್ಕೆ ಸಹಿಸುತ್ತಿಲ್ಲ. ನೀವು ಐವತ್ತು ವರ್ಷ ಅಧಿಕಾರದಲ್ಲಿದ್ದರೂ ನಾವು ಕೇಳಿಲ್ಲ ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಕೋಟ ಠಾಣೆಯ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.