ಬೆಂಗಳೂರು, ಅ.24 (DaijiworldNews/ AK):ಸ್ಟಿಂಗ್ ಪ್ರಕರಣದಲ್ಲಿ ನಾಪತ್ತೆಯಾಗಿರುವವರು ಕುಮಾರಸ್ವಾಮಿ ಎಡಗೈ-ಬಲಗೈ ಬಂಟರು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸ್ಟಿಂಗ್ ಪ್ರಕರಣದ ಸತ್ಯ ಹೊರ ಬರಲಿ. ತನಿಖೆ ಹಂತದಲ್ಲಿದೆ. ನಮ್ಮ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ಇವತ್ತಲ್ಲ ನಾಳೆ ಸತ್ಯ ಗೊತ್ತಾಗುತ್ತದೆ. ಇದರಲ್ಲಿ ಗೊಂದಲ ಅನುಮಾನ ಪಡುವುದು ಇಲ್ಲ. ಸ್ವಲ್ಪ ಸಮಯ ಬೇಕು, ಎಲ್ಲ ಗೊತ್ತಾಗುತ್ತೆ. ಯರ್ಯಾರು ಮಾಡಿದ್ದಾರೆ, ಹಿಂದೆ ಯಾರಿದ್ದಾರೆ, ಎಲ್ಲಾ ಗೊತ್ತಾಗಲಿದೆ ಎಂದರು.
ಇಷ್ಟು ವರ್ಷ ಆದ ಮೇಲೆ ಯಾರ ಕೈಗೆ ಸಿಕ್ತು, ಇದ್ದಕ್ಕಿದ್ದಂತೆ ಯಾಕೆ ಅಪ್ಲೋಡ್ ಆಯ್ತು, ಯಾರ ಕೈಗೆ ಸಿಕ್ತು? ಎಲ್ಲಾನು ಗೊತ್ತಾಗುತ್ತದೆ. ಅದರ ಮೂಲದಿಂದ ಹಿಡಿದು ಇಲ್ಲಿ ತನಕ ಏನೇನಾಗಿದೆ ಎಲ್ಲವನ್ನು ಬಯಲು ಮಾಡುತ್ತೇವೆ ಎಂದು ತಿಳಿಸಿದರು.
ಇದರಲ್ಲಿ ಯಾರೇ ಇರಲಿ ನಾವು ತನಿಖೆಯನ್ನು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಮಾಡ್ತೀವಿ. ನಿಷ್ಪಕ್ಷಪಾತವಾದ ತನಿಖೆ ಆಗೆ ಆಗುತ್ತೆ. ಯಾವುದೇ ರಾಜಕೀಯ ಒತ್ತಡ ಇಲ್ಲದೆ ತನಿಖೆ ಆಗುತ್ತದೆ. ಯರ್ಯಾರ ಹೆಸರು ಉಲ್ಲೇಖಿಸಿದ್ದಾರೆ, ಅವರನ್ನೆಲ್ಲ ತನಿಖೆಗೆ ಒಳಪಡಿಸಿದ್ದೇವೆ. ಸ್ಟೇಟ್ಮೆಂಟ್ ರೆಕಾರ್ಡ್ ಮಾಡಿದ್ದೇವೆ, ಇಂಟರಾಗೇಶನ್ ರೆಕಾರ್ಡ್ ಆಗಿದೆ. ಸಮಯ ಬಂದಾಗ ನಿಮ್ಮ ಮುಂದೆ ಇಡುತ್ತೇವೆ. ಇದರಲ್ಲಿ ತಪ್ಪಿಸಿಕೊಳ್ಳುವುದು ಇಲ್ಲ. ಚಾರ್ಜ್ಶೀಟ್ ಆಗಲೇಬೇಕು ಕೋರ್ಟ್ಗೆ ಸಲ್ಲಿಸಲೇಬೇಕು. ಆರ್ಟಿಐನಲ್ಲಿ ಬರಲೇಬೇಕು ಎಂದರು.