ಶಿವಮೊಗ್ಗ, ಅ.21 (DaijiworldNews/AK): ಸೋಮಣ್ಣ ಆನೆ ಗಲಿಬಿಲಿಗೊಂಡು ದಿಕ್ಕಾಪಾಲಾಗಿ ಓಡಿ ಹೋಗಿದ್ದರಿಂದ ಅಂಬಾರಿಗೆ ಹಾನಿಯಾಗಿ ಶಿವಮೊಗ್ಗ ದಸರಾ ಜಂಬೂ ಸವಾರಿ ಸ್ಥಗಿತಗೊಂಡಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆನೆಗಳು ಬೆದರಿ ವಾಪಸ್ ಬಂದಿವೆ. ಸೋಮಣ್ಣ ಆನೆ ನಿಯಂತ್ರಣಕ್ಕೆ ಬಂದಿದೆ. ಇನ್ನೆರಡು ಆನೆಗಳನ್ನೂ ಸಹ ನಿಯಂತ್ರಣಕ್ಕೆ ತರಲಾಗಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಸೋಮಣ್ಣ ಸೇರಿ ಇನ್ನಿತರ ಆನೆಗಳನ್ನು ಸ್ವಸ್ಥಳಕ್ಕೆ ಕಳುಹಿಸುತ್ತೇವೆ ಎಂದಿದ್ದಾರೆ.
ಈಗ ಮುಂದಿನ ಸಂಪ್ರದಾಯಗಳು ಮುಂದುವರೆಯಲಿವೆ. ಆನೆಗಳು ಯಾಕೆ ಬೆದರಿದವು ಎಂಬುದರ ಬಗ್ಗೆ ಆರಣ್ಯ ತಜ್ಞರು ಪರಿಶೀಲನೆ ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.