ನವದೆಹಲಿ, ಅ.10 (DaijiworldNews/AA): ರಾಜಕೀಯ ಲಾಭಕ್ಕಾಗಿ ಹಾಗೂ ವಿದೇಶಿ ಶಕ್ತಿಗಳ ಹಿತಾಸಕ್ತಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತಿರುವ ಇಂಡಿಯ ಮೈತ್ರಿಕೂಟ ಮತ್ತು ಕೇಜ್ರಿವಾಲ್ ಅವರಿಗೆ ನಿಕಟವಾಗಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, "ಪ್ರಸ್ತುತ ಪರಿಸ್ಥಿತಿ ಅತ್ಯಂತ ಅಪಾಯಕಾರಿ ಮತ್ತು ಗಂಭೀರವಾದುದು. ಈ ಗುಂಪುಗಳು ಚುನಾವಣೆಯಲ್ಲಿ ಜನ ನೀಡಿರುವ ತೀರ್ಪನ್ನು ಸ್ವೀಕರಿಸಲು ನಿರಾಕರಿಸುತ್ತಿವೆ. ಜನಾದೇಶವನ್ನು ಸ್ವೀಕರಿಸುವ ಅಥವಾ ಅದರಿಂದ ಕಲಿಯುವ ಬದಲು, ನೀವು ದೇಶವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದ್ದೀರಿ" ಎಂದು ಆರೋಪ ಮಾಡಿದರು.
"ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಸ್ವಾವಲಂಬಿ ರಾಷ್ಟ್ರವಾಗುವ ಭಾರತದ ಪ್ರಗತಿಯು ಮುಂದುವರಿದಿದೆ. ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳು ರಾಷ್ಟ್ರೀಯ ಸ್ಥಿರತೆಯನ್ನು ಕದಡುವ ಇಂತಹ ಪ್ರಯತ್ನಗಳನ್ನು ಯಶಸ್ವಿಯಾಗಿ ಎದುರಿಸಲಿವೆ" ಎಂದು ತಿಳಿಸಿದರು.