ಬೆಂಗಳೂರು, ಅ.08 (DaijiworldNews/AK) : ಮುಂಬರುವ ಎಸ್ಎಸ್ಎಲ್ಸಿ ಮತ್ತು ದ್ವೀತಿಯ ಪಿಯುಸಿ ಪಬ್ಲಿಕ್ ಪರೀಕ್ಷೆ-1 ಮತ್ತು ಪರೀಕ್ಷೆ 2ರ ತಾತ್ಕಾಲಿಕ ವೇಳಾಪಟ್ಟಿಯನ್ನ ಕರ್ನಾಟಕ ಪರೀಕ್ಷಾ ಮಂಡಳಿ ಬಿಡುಗಡೆಗೊಳಿಸಿದೆ.

ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನ ಪ್ರಕಟ ಮಾಡಿದ್ದು, ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ-1, 2 ಪರೀಕ್ಷೆಗಳನ್ನ 2027 ಮಾರ್ಚ್ 22 ರಿಂದ ಏಪ್ರಿಲ್ 5ರ ವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿ ಪರೀಕ್ಷೆ – 1 ಮತ್ತು ಪರೀಕ್ಷೆ – 2 ಅನ್ನು 2027 ಫೆಬ್ರವರಿ 27 ರಿಂದ ಮೇ 15 ರವರೆಗೆ ನಡೆಸಲು ನಿರ್ಧಸಲಾಗಿದೆ.
SSLC ಪರೀಕ್ಷೆ -1 ವೇಳಾಪಟ್ಟಿ
* ಮಾರ್ಚ್ 22 ಕ್ಕೆ ಪ್ರಥಮ ಭಾಷೆ
* ಮಾರ್ಚ್ 25 ಕ್ಕೆ ವಿಜ್ಞಾನ, ರಾಜ್ಯಶಾಸ್ತ್ರ
* ಮಾರ್ಚ್ 27 ಕ್ಕೆ ದ್ವಿತೀಯ ಭಾಷೆ
* ಮಾರ್ಚ್ 30 ಕ್ಕೆ ಗಣಿತ, ಸಮಾಜಶಾಸ್ತ್ರ
* ಏಪ್ರಿಲ್ 2 ಕ್ಕೆ ತೃತೀಯ ಭಾಷೆ
* ಏಪ್ರಿಲ್ 3 ಕ್ಕೆ ಅರ್ಥಶಾಸ್ತ್ರ,
* ಏಪ್ರಿಲ್ 5 ಕ್ಕೆ ಸಮಾಜವಿಜ್ಞಾನ
ಎಸ್ಎಸ್ಎಲ್ಸಿ ಪರೀಕ್ಷೆ-2 ತಾತ್ಕಾಲಿಕ ವೇಳಾಪಟ್ಟಿ
* ಮೇ 24- ಪ್ರಥಮ ಭಾಷೆ
* ಮೇ 25- ವಿಜ್ಞಾನ
* ಮೇ 26- ದ್ವೀತಿಯ ಭಾಷೆ
* ಮೇ 27-ಗಣಿತ
* ಮೇ 28- ತೃತೀಯ ಭಾಷೆ
* ಮೇ 29- ಸಮಾಜ ವಿಜ್ಞಾನ
ದ್ವಿತೀಯ ಪಿಯುಸಿ ಪರೀಕ್ಷೆ 1ರ ವೇಳಾಪಟ್ಟಿ (2027)
* ಫೆಬ್ರವರಿ 27: ಕನ್ನಡ, ಅರೇಬಿಕ್
* ಮಾರ್ಚ್ 1: ಇಂಗ್ಲಿಷ್
* ಮಾರ್ಚ್ 2: ಪ್ರಾದೇಶಿಕ ಭಾಷೆಗಳು
* ಮಾರ್ಚ್ 3: ಭೂಗೋಳ ಶಾಸ್ತ್ರ, ಮನಃಶಾಸ್ತ್ರ
* ಮಾರ್ಚ್ 4: ಸಮಾಜಶಾಸ್ತ್ರ, ಭೌತಶಾಸ್ತ್ರ
* ಮಾರ್ಚ್ 5: ಲೆಕ್ಕಶಾಸ್ತ್ರ
* ಮಾರ್ಚ್ 6: ಮಹಾಶಿವರಾತ್ರಿ ಹಿನ್ನೆಲೆ ಯಾವುದೇ ಪರೀಕ್ಷೆ ಇಲ್ಲ
* ಮಾ.8: ರಸಾಯನ ಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
* ಮಾ.9: ಅರ್ಥಶಾಸ್ತ್ರ, ಭೂಗರ್ಭ ಶಾಸ್ತ್ರ
* ಮಾ.11: ಹಿಂದೂಸ್ತಾನಿ ಸಂಗೀತ, ವೃತ್ತಿಪರ ವಿಷಯಗಳ ಪರೀಕ್ಷೆ
* ಮಾ.12: ವ್ಯವಹಾರ ಅಧ್ಯಯನ, ಗಣಿತ
* ಮಾ.13: ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ ಮಾ.15ರಂದು ರಾಜ್ಯಶಾಸ್ತ್ರ, ಜೀವಶಾಸ್ತ್ರ, ಗಣಕಶಾಸ್ತ್ರ
* ಮಾ.16ರಂದು ಇತಿಹಾಸ, ಸಂಖ್ಯಾಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
* ಮಾ.17ರಂದು ಹಿಂದಿ ಪರೀಕ್ಷೆಯೊಂದಿಗೆ ಪರೀಕ್ಷೆ 1ಕ್ಕೆ ತೆರೆ ಬೀಳಲಿದೆ.
* ದ್ವಿತೀಯ ಪಿಯುಸಿ ಪರೀಕ್ಷೆ 2ರ ವೇಳಾಪಟ್ಟಿ (2027)
* ಮೇ 03: ಕನ್ನಡ, ಅರೇಬಿಕ್
* ಮೇ 04: ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ
* ಮೇ 05: ರಾಜ್ಯಶಾಸ್ತ್ರ, ಗಣಕಶಾಸ್ತ್ರ
* ಮೇ 06: ಇತಿಹಾಸ, ರಸಾಯನಶಾಸ್ತ್ರ
* ಮೇ 07: ವ್ಯವಹಾರ ಅಧ್ಯಯನ, ಮನಃ ಶಾಸ್ತ್ರ, ಶಿಕ್ಷಣ ಶಾಸ್ತ್ರ
* ಮೇ 08: ಐಚ್ಛಿಕ ಕನ್ನಡ,ಭೌತ ಶಾಸ್ತ್ರ, ಮೂಲ ಗಣಿತ
* ಮೇ 10: ಅರ್ಥಶಾಸ್ತ್ರ, ಗಣಿತ
* ಮೇ 11: ಹಿಂದಿ
* ಮೇ 12: ಇಂಗ್ಲಿಷ್
* ಮೇ 13: ಸಮಾಜ ಶಾಸ್ತ್ರ, ಸಂಖಾಶಾಸ್ತ್ರ
* ಮೇ 14: ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
* ಮೇ 15: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್