ಬೆಂಗಳೂರು,ಅ.07 (DaijiworldNews/AK): ಕೆಪಿಎಸ್ಸಿ ಹಗರಣ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಗೀತಾ ಅವರನ್ನು 13 ದಿನ ಇ.ಡಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶಿಸಿದೆ.

ಬಂಧನಕ್ಕೊಳಗಾಗಿರುವ ಶಿವಶಂಕರಪ್ಪ ಹಾಗೂ ಗೀತಾ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇಡಿ ಪರ ವಕೀಲ ಮಧುರಾವ್ ವಾದಿಸಿದರು. ಪೊಲೀಸ್ ಕಸ್ಟಡಿಗೆ ನೀಡಲು ಶಿವಶಂಕರಪ್ಪ, ಗೀತಾ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು.
ಇಡಿ ಪರ ವಕೀಲ ಮಧುರಾವ್ ವಾದಿಸಿ, ಅಭ್ಯರ್ಥಿಗಳಿಂದ ಪ್ರಶ್ನೆಪತ್ರಿಕೆ ಮತ್ತು ಉತ್ತರ ನೀಡಲು 70 ಲಕ್ಷ ಹಣ ಪಡೆದುಕೊಂಡಿದ್ದಾರೆ. ಜ.9 ರಂದು ಪರೀಕ್ಷೆ ದಿನ ಮುನ್ನ ಕೆಲ ಅಭ್ಯರ್ಥಿಗಳ ಜೊತೆ ಅಧ್ಯಕ್ಷರು ಮಾತನಾಡಿದ್ದಾರೆ. ಐಎಫ್ಎಸ್ ಪರೀಕ್ಷೆ ಮತ್ತು ಗೋಲ್ಡ್ ಮೆಡಲ್ ಪಡೆದ ಅಭ್ಯರ್ಥಿಗಳು 350 ಅಂಕ ಪಡೆಯುವುದಕ್ಕೆ ಕಷ್ಟ ಪಟ್ಟಿದ್ದಾರೆ.
ಕಾಲೇಜಿನಲ್ಲಿ ಪದವಿಯಲ್ಲಿ ಪಡೆದ ಅಭ್ಯರ್ಥಿ ಕಡಿಮೆ ಅಂಕ ಪಡೆದು ಪಾಸ್ ಆದ ಅಭ್ಯರ್ಥಿ. ಕೆಪಿಎಸ್ಸಿ ಪರೀಕ್ಷೆಯಲ್ಲಿ 450 ಅಂಕಗಳನ್ನು ಪಡೆದಿದ್ದಾರೆ. ಒಬ್ಬೊಬ್ಬ ಅಭ್ಯರ್ಥಿಗಳಿಗೆ ಒಂದೊಂದು ರೆಟ್ ಫಿಕ್ಸ್ ಮಾಡಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ಪರೀಕ್ಷೆ ನಡೆದಿದೆ. ಪರೀಕ್ಷೆ ಕಂಟ್ರೋಲರ್ ಆಗಿದ್ದ ಗ್ಯಾನೇಂದ್ರ ಕುಮಾರ್ ಅಧ್ಯಕ್ಷರ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. 2022 ರಿಂದ 13 ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ. ವಿಚಾರಣೆ ವೇಳೆ ಪರೀಕ್ಷೆ ಕಂಟ್ರೋಲರ್ ಗ್ಯಾನೇಂದ್ರ ಕುಮಾರ್ ಒಪ್ಪಿಕೊಂಡಿದ್ದಾರೆ ಎಂದು ಕೋರ್ಟ್ಗೆ ಮಾಹಿತಿ ನೀಡಿದರು.