ಬೆಂಗಳೂರು, ಅ.07 (DaijiworldNews/AK): ಹೈಕಮಾಂಡ್ಗೆ ಸ್ಟಿಂಗ್ ಆಪರೇಷನ್ ವೀಡಿಯೋ ಕೊಟ್ಟು ಡಿಕೆಶಿ ಸಿಎಂ ಆಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಡಿಕೆಶಿ ಸಚಿವರಿಗೆ ಎಚ್ಚರಿಕೆ ಕೊಟ್ಟ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಆಗೋಕೆ ಕಾರಣ ಹೈಕಮಾಂಡ್ಗೆ ಸ್ಟಿಂಗ್ ಆಪರೇಷನ್ ವೀಡಿಯೋ ಕೊಟ್ಟು ಸಿಎಂ ಆಗಿದ್ದಾರೆ ಅಂತ ಕಾಂಗ್ರೆಸ್ನವರು ಹೇಳುತ್ತಾರೆ. ಈ ಸಿಎಂಗೆ ಸ್ಟಿಂಗ್ ಆಪರೇಷನ್ ಮಾಡೋದೆ ಕೆಲಸನಾ? ಮಂತ್ರಿಗಳ ಮೇಲೆ ವಿಶ್ವಾಸ ಇಲ್ವಾ ಎಂದು ಕಿಡಿಕಾರಿದರು.
ಕ್ಯಾಬಿನೆಟ್ನಲ್ಲಿ ಕೂತು ಮಾತಾಡೋದಾ? ಎಲ್ಲಾದ್ರು ಉಂಟಾ? ನನಗೆ ಮಾಹಿತಿ ಬರುತ್ತಿದೆ ಅಂತ ಹೇಳುತ್ತಿದ್ದಾರೆ. ಸಚಿವರ ಸ್ಟಿಂಗ್ ಮಾಡಿ ಡಿಕೆಶಿ ಅವರ ಕಪಿಮುಷ್ಠಿಯಲ್ಲಿ ಇಟ್ಟಿಕೊಳ್ಳಲು ನೋಡುತ್ತಿದ್ದಾರೆ. ಕುಮಾರಸ್ವಾಮಿ ಮಾಡುತ್ತಿದ್ದಾರೆ ಅಂದರೆ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದರು.